VIDEO: ಬಾಯ್​ಫ್ರೆಂಡ್​ ಪ್ರಪೋಸ್ ಮಾಡಿದ..ಈಕೆ ಮುತ್ತು ಕೊಡಲು ಹೋದಳು; ಆದರೆ ಮುಂದಾಗಿದ್ದು ಘೋರ ಎಡವಟ್ಟು...

Video
Published on

ಲವ್​ ಪ್ರಪೋಸ್​, ಮದುವೆ ಪ್ರಪೋಸ್​​ಗಳಲ್ಲಿ ಎಂತೆಂಥಾ ಫನ್ನಿ ಘಟನೆಗಳು ನಡೆಯುತ್ತವೆ ಎಂಬುದನ್ನು ನೋಡಿದ್ದೇವೆ...

ತನ್ನ ಬಹುಕಾಲದ ಗೆಳತಿಗೆ ಮದುವೆ ಪ್ರಪೋಸ್​ ಮಾಡೋಕೆಂದು ಮನೆಯಲ್ಲೆ ಬಲೂನ್, ಕ್ಯಾಂಡಲ್​ನಿಂದ ಸಿಂಗರಿಸಿ, ಆಕೆಯನ್ನು ಕರೆದುಕೊಂಡು ಬರಲು ಹೋದವನ ಮನೆ ಸಂಪೂರ್ಣ ಸುಟ್ಟುಹೋದ ಘಟನೆ ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. ಇದೊಂದು ದುರಂತವೂ ಹೌದು..

ಹಾಗೇ ಈಗ ಇನ್ನೊಂದು ಜೋಡಿಯ ವಿಡಿಯೋ ವೈರಲ್ ಆಗಿದೆ. ಈ ವ್ಯಕ್ತಿ ನದಿ ಮಧ್ಯ ಬೋಟ್​ನಲ್ಲಿ ನಿಂತು ಪ್ರಪೋಸ್​ ಮಾಡಲು ಮುಂದಾಗುತ್ತಾನೆ. ಆಕೆಯೂ ಖುಷಿಯಿಂದಲೇ ಇರುತ್ತಾಳೆ..ಆದರೆ ಕೊನೆಗೆ ಮಾತ್ರ ಆಗಿದ್ದು ಅವಘಡ.. ಇದನ್ನೂ ಓದಿ: ನಿಲ್ಲಿ ಹೋಗಬೇಡಿ ಎಂದರೂ ಕೇಳಲಿಲ್ಲ… ಅವರಿಬ್ಬರು ಜವರಾಯನ ಕೂಪಕ್ಕೆ ಸಿಲುಕೇ ಬಿಟ್ಟರು!

ಅದೊಂದು ಕೊಳ..ಯುವತಿಯೋರ್ವಳು ಒಂದು ಬೋಟ್​​ನಲ್ಲಿ ಕುಳಿತಿದ್ದಾಳೆ. ಆ ಬೋಟ್​ ಪಕ್ಕ ಇರುವ ಇನ್ನೊಂದು ಬೋಟ್​​ ನಲ್ಲಿ ಆಕೆಯ ಪ್ರಿಯತಮ ಹೋಗುತ್ತಾನೆ. ಆಕೆಯೂ ಎದ್ದು ನಿಲ್ಲುತ್ತಾಳೆ..ಈತ ಅವಳ ಕೈಗೆ ಏನನ್ನೋ ಕೊಡುತ್ತಾನೆ. ಫುಲ್​ ಖುಷಿಯಾದ ಆಕೆ ಪ್ರಿಯತಮನಿಗೆ ಇನ್ನೇನು ಮುತ್ತು ಕೊಡಲು ಸಿದ್ಧಳಾಗುತ್ತಾಳೆ..ಅಷ್ಟರಲ್ಲಿ ಆಕೆಯ ಬೋಟ್​ ಸ್ವಲ್ಪ ಮುಂದಕ್ಕೆ ಚಲಿಸುತ್ತದೆ. ಅವಳು ಬೀಳುವ ಭರದಲ್ಲಿ ಕಾಲು ಈತನ ಮುಖಕ್ಕೆ ತಾಗುತ್ತದೆ. ಅಲ್ಲಿಗೆ ಮುತ್ತು ಕೊಡಲು ಹೋದವಳು ಮುಖಕ್ಕೆ, ಹೊಟ್ಟೆಗೆ ಎಲ್ಲ ಒದೆಯುತ್ತಾಳೆ. ಆಕೆಯ ಒದೆ ಬೀಳುತ್ತಿದ್ದಂತೆ ವ್ಯಕ್ತಿ ನೀರಿಗೆ ಬೀಳುತ್ತಾನೆ.

ಇದೊಂದು ಫನ್ನಿ ಪ್ರಪೋಸ್ ತರ ಅನ್ನಿಸಿದರೂ ದುರಂತವೇ ಸರಿ. ಸ್ವಲ್ಪ ಹೆಚ್ಚುಕಡಿಮೆಯಾದರೂ ಇಬ್ಬರೂ ಗಾಯಗೊಳ್ಳುವ ಸಾಧ್ಯತೆ ಇತ್ತು. ಸದ್ಯಕ್ಕೆ ಇಬ್ಬರಿಗೂ ಏನೂ ಅಪಾಯ ಆಗಿಲ್ಲ. ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತುಂಬ ವೈರಲ್ ಆಗುತ್ತಿದ್ದು, ನೆಟ್ಟಿಗರೂ ಸಿಕ್ಕಾಪಟೆ ಕಾಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net