ವಿದೇಶದಲ್ಲಿ ಮಸಾಲಾ ಟೀ ಸಿಗದೆ ‘ದ ಇಂಡಿಯನ್‌ ಕಿಚನ್‌’ ಹೋಟೆಲ್‌ ತೆರೆದ ಬೆಂಗ್ಳೂರಿನ ಉದ್ಯಮಿ

samarkand
Published on

ಬೆಂಗಳೂರು: ಕರ್ನಾಟಕದ ಪ್ರತಿ ಜಿಲ್ಲೆ, ಊರು, ಹಳ್ಳಿಗಳು ತಮ್ಮದೇ ಆಗಿರುವ ಭಾಷೆ, ಊಟ-ಉಪಹಾರ, ಉಡುಪು, ಸಂಪ್ರದಾಯವನ್ನು ಒಳಗೊಂಡಿದೆ.ನಾವು ವಿದೇಶಗಳಿಗೆ ಪ್ರವಾಸಕ್ಕೆ ತೆರಳಿದರೆ ನಮ್ಮೂರಿನ ಊಟವನ್ನು ಮಿಸ್​ ಮಾಡಿಕೊಳ್ಳುವುದು ಸಹಜ. ಹೀಗೆ ಬೆಂಗಳೂರಿನ ನಿವಾಸಿಯೊಬ್ಬರು ತಾವು ವಿದೇಶ ಪ್ರವಾಸ ಕೈಗೊಂಡಿದ್ದಾಗ ಬೆಂಗಳೂರಿನ ಟೀ, ಉಪಹಾರಗಳು ಸಿಗದೆ ತಾವೇ ಅಲ್ಲಿ ಹೊಟೇಲ್​ ತೆರೆಯುವ ನಿರ್ಧಾರ ಮಾಡಿ.. ಹೊಸದೊಂದು ಸಾಹಸಕ್ಕೆ ಕೈ ಹಾಕುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ಉಕ್ಕು ಉದ್ಯಮದಲ್ಲಿ ತೊಡಗಿಕೊಂಡಿದ್ದ ಬೆಂಗಳೂರಿನ ಉದ್ಯೋಗಿಯಾಗಿದ್ದ ಮೊಹಮ್ಮದ್ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಹೀಗೆ ಸಮರ್ಕಂಡ್‌ಗೆ ಹೋಗಿದ್ದಾಗ ಬೆಂಗಳೂರು ಮೂಲದ ಮೊಹಮ್ಮದ್‌ ನೌಶಾದ್‌ ಅವರು ಬೆಂಗಳೂರಿನಲ್ಲಿ ತಾನು ಇಷ್ಟಪಟ್ಟು ಸವಿಯುತ್ತಿದ್ದ ಮಸಾಲಾ ಟೀ ಮತ್ತು ಪರೋಟಾ ಉಜ್ಬೇಕಿಸ್ತಾನದ ಸಮರ್ಕಂಡ್‌ನಲ್ಲಿ ಸಿಗದೇ ಬೇಸರಗೊಂಡಿದ್ದರು. ಅಲ್ಲಿಯೇ ‘ದ ಇಂಡಿಯನ್‌ ಕಿಚನ್‌’ ಎಂಬ ನೂತನ ಹೋಟೆಲ್‌ವೊಂದನ್ನು ಸ್ಥಾಪಿಸಿದ್ದಾರೆ.

ಮೊಹ್ಮದ್​​ ಮಾತನಾಡಿ,  ನಾನು ಪ್ರವಾಸಿಯಾಗಿ ಇಲ್ಲಿಗೆ ಬಂದಾಗ ನನ್ನ ಎಂದಿನ ತಿಂಡಿಯಾದ ಮಸಾಲಾ ಟೀ ಮತ್ತು ಪರೋಟವನ್ನು ಸೇವಿಸಲು ಹೊರಟೆ. ಆದರೆ ಆಗ ಇಲ್ಲಿ ಭಾರತೀಯ ಶೈಲಿಯ ತಿನಿಸು ಅಥವಾ ಹೋಟೆಲ್‌ ಇಲ್ಲ ಎಂಬುದನ್ನು ಕಂಡು ಆಶ್ಚರ್ಯವಾಯಿತು. ಬಳಿಕ ನಾನೇ ಹೋಟೆಲ್‌ ಪ್ರಾರಂಭಿಸಿದೆ. ಇದೀಗ ಪ್ರತಿದಿನ ಹೋಟೆಲ್‌ಗೆ 300 ರಿಂದ 400 ಜನರು ಆಗಮಿಸುತ್ತಾರೆ ಎಂದಿದ್ದಾರೆ.

ಏಕೈಕ ಭಾರತೀಯ ಶೈಲಿಯ ಹೋಟೆಲ್‌: ಸಮರ್ಕಂಡ್‌ನಲ್ಲಿರುವ ಏಕೈಕ ಭಾರತೀಯ ಶೈಲಿಯ ಹೋಟೆಲ್‌ ಆಗಿದೆ. ತಮಿಳುನಾಡು ಮೂಲದ ಬಾಣಸಿಗ ಅಶೋಕ್‌ ಕಾಳಿದಾಸ ಎಂಬುವವರು ಮೊಹಮ್ಮದ್ ಜತೆ ಕೈ ಜೋಡಿಸಿದ್ದಾರೆ. ಇದೀಗ ಇಲ್ಲಿನ ಮಸಾಲೆ ದೋಸೆ, ಚಿಕನ್‌ ಬಿರಿಯಾನಿ ನಗರದಲ್ಲಿ ಭಾರೀ ಜನಪ್ರಿಯತೆ ಗಳಿಸಿವೆ. ಪ್ರವಾಸಿಗರು, ಸ್ಥಳೀಯರೂ ಸೇರಿದಂತೆ ಅಲ್ಲಿನ ಭಾರತೀಯ ಮೂಲದ ಜನರು ಇದೇ ಹೋಟೆಲಿಗೆ ಬಂದು ತಮ್ಮಿಷ್ಟದ ಖಾದ್ಯ ಸವಿಯುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net