ದೇವಸ್ಥಾನದ ಆವರಣದಲ್ಲಿ ಕೊಲೆ, ಸಂಬಂಧಿಯೇ ಕೊಲೆಗಾರ..

crime
Published on

ಉತ್ತರಪ್ರದೇಶ: ಇಲ್ಲಿನ ಅಯೋಧ್ಯೆಯ ದೇವಸ್ಥಾನವೊಂದರ ಆವರಣದಲ್ಲಿ ಸಂಬಂಧಿಯಿಂದಲೇ ಕೊಲೆಯೊಂದು ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪಂಕಜ್​ ಶುಕ್ಲಾ (35) ಕೊಲೆಗೀಡಾದವ. ಈತನ ಕಸಿನ್ ಗೋಲು ಮಿಶ್ರಾ ಕೊಲೆಗಾರ.

ಅಮೇಠಿ ನಿವಾಸಿ ಪಂಕಜ್ ಶುಕ್ಲ ತನ್ನ ತಾಯಿಯ ಊರಾದ ಅಯೋಧ್ಯೆಯ ಭುವಾಪುರ್ ಗ್ರಾಮಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ. ಇಲ್ಲಿನ ಕುಮಾರ್​ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ದೇವಸ್ಥಾನವೊಂದರ ಆವರಣದಲ್ಲಿ ಇಂದು ರಕ್ತದ ಮಡುವಲ್ಲಿದ್ದ ಶವ ಕಂಡುಬಂದಿದ್ದು, ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಗೋಲು ಮಿಶ್ರಾನನ್ನು ಬಂಧಿಸಿದ್ದಾರೆ. ಶನಿವಾರ ರಾತ್ರಿ ಶುಕ್ಲ ಮತ್ತು ಮಿಶ್ರಾ ನಡುವೆ ಮದ್ಯಪಾನದ ಮತ್ತಿನಲ್ಲಿ ಜಗಳವಾಗಿತ್ತು. ಈ ಸಂದರ್ಭದಲ್ಲಿ ಮಿಶ್ರಾ ಹರಿತವಾದ ಆಯುಧದಿಂದ ಶುಕ್ಲನ ಕತ್ತು ಸೀಳಿ ಓಡಿಹೋಗಿದ್ದ ಎಂಬುದು ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net