ತಾನು ಪ್ರತಿದಿನ ಮಲಗುತ್ತಿದ್ದ ಬಸ್​ಸ್ಟಾಪ್​​ನಲ್ಲಿಯೇ ನೇಣು ಬಿಗಿದುಕೊಂಡ ಭಿಕ್ಷುಕ; ಜತೆಗಿದ್ದವ ಪೊಲೀಸರಿಗೆ ತಿಳಿಸಿದ್ದೇನು?

Beggar Death
Published on

ಮುಂಬೈ: ರಸ್ತೆ ಪಕ್ಕದ ಬಸ್​ ಸ್ಟ್ಯಾಂಡ್​ನಲ್ಲಿಯೇ ವ್ಯಕ್ತಿಯೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಮುಂಬೈನ ನಾಗ್ಪದದಲ್ಲಿ ನಡೆದಿದೆ.

ಇಂದು ಮುಂಜಾನೆ ಕರೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಆ ಸ್ಥಳದ ಸುತ್ತಮುತ್ತ ಓಡಾಡಿಕೊಂಡು, ಬಸ್​ಸ್ಟಾಪ್​​ನಲ್ಲೇ ಮಲಗಿರುತ್ತದ ಭಿಕ್ಷುಕ ನೇಣುಬಿಗಿದುಕೊಂಡಿದ್ದಾನೆ.

ಆತನ ಹೆಸರು ಗೊತ್ತಿಲ್ಲ. ಆಸುಪಾಸು 45 ವರ್ಷವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ನೇಣು ಬಿಗಿದುಕೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದ.

ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆದರೆ ಈಗ ಮೃತಪಟ್ಟ ಭಿಕ್ಷುಕನ ವಿರುದ್ಧ ಹಿಂದೊಮ್ಮೆ ಯಾವುದೋ ಕೇಸ್​ ದಾಖಲಾಗಿತ್ತು ಎಂದು ಅವನ ಜತೆಗಿದ್ದವನೊಬ್ಬ ತಿಳಿಸಿದ್ದಾನೆ. ಹಾಗಾಗಿ ಹೆಚ್ಚಿನ ತನಿಖೆ ಮಾಡುತ್ತೇವೆ ಎಂದು ನಾಗ್ಪದ ಠಾಣೆ ಹಿರಿಯ ಅಧಿಕಾರಿ ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net