ಪತ್ನಿಯನ್ನು ಹತ್ಯೆ ಗೈದು ದೇಹವನ್ನು ತುಂಡರಿಸಿ ಬೆಂಕಿ ಹಚ್ಚಿದ ಪತಿರಾಯ!

Crime
Published on

ನವದೆಹಲಿ: ಪತ್ನಿಯನ್ನು ಕೊಂದು ತುಂಡರಿಸಿ,  ಬೆಂಕಿ ಹಚ್ಚಿದ ಆರೋಪದ ಮೇಲೆ 34 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜಿತೇಂದರ್ ಬಂಧಿತ ಆರೋಪಿಯಾಗಿದ್ದಾನೆ. ಏಪ್ರಿಲ್ 21 ರಂದು ಮಾನೇಸರ್‌ನ ಹಳ್ಳಿಯೊಂದರಲ್ಲಿ ಮಹಿಳೆಯ ಅರ್ಧ ಸುಟ್ಟ ಮುಂಡ ಪತ್ತೆಯಾಗಿದ್ದು, ಮಹಿಳೆಯ ತಲೆ ಕಾಣೆಯಾಗಿದ್ದು, ಆಕೆಯ ಕೈಗಳನ್ನು ಕತ್ತರಿಸಲಾಗಿತ್ತು. ಆಕೆಯನ್ನು ಬೇರೆಡೆ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದರು.

ಆರೋಪಿ ಜಿತೇಂದರ್ ಗಾಂಧಿನಗರದ ನಿವಾಸಿಯಾಗಿದ್ದು, ಮನೇಸರ್ ಪ್ರದೇಶದಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು. ಕುಕ್ಡೋಲಾ ಗ್ರಾಮದ ಉಮೇದ್ ಸಿಂಗ್ ಎಂಬುವರು ಗುತ್ತಿಗೆ ಪಡೆದ ಜಮೀನಿನಲ್ಲಿ ನಿರ್ಮಿಸಲಾಗಿದ್ದ ಎರಡು ಕೊಠಡಿಗಳಲ್ಲಿ ಒಂದರಿಂದ ಮಹಿಳೆಯ ಶವ ಪತ್ತೆಯಾಗಿದೆ. ಒಂದು ಕೋಣೆಯಲ್ಲಿ ಸ್ವಲ್ಪ ಹೊಗೆ ಬರುತ್ತಿರುವುದನ್ನು ಗಮನಿಸಿದ ಜನರು ಉಮೇದ್ ಗೆ ಮಾಹಿತಿ ನೀಡಿದ್ದಾರೆ. ನಾನು ಜಮೀನಿಗೆ ಹೋದಾಗ, ಕೋಣೆಯಲ್ಲಿ ಅರ್ಧ ಸುಟ್ಟ ಮುಂಡವನ್ನು ಕಂಡು ನಾನು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ' ಎಂದು ಉಮೇದ್ ದೂರಿನಲ್ಲಿ ತಿಳಿಸಿದ್ದಾರೆ.

ತನಿಖೆ ಆರಂಭಿಸಿದ ಪೊಲೀಸರ ಕೈಗೆ ಆರೋಪಿ ತಗಲಾಕೊಂಡಿದ್ದು,ಆರೋಪಿ ತನ್ನ ಪತ್ನಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net