

ಫ್ರಾನ್ಸ್: ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿಗೆ ಪ್ರತಿನಿತ್ಯ ನಿತ್ಯ ಡ್ರಗ್ಸ್ ನೀಡಿ ಬಳಿಕ ಆಕೆಯನ್ನು ಪರಪುರುಷರ ಬಳಿ ಕಳುಹಿಸುತ್ತಿದ್ದ ಘಟನೆ ಫ್ರಾನ್ಸ್ನಲ್ಲಿ ನಡೆದಿದೆ.
ಕಳೆದ 10 ವರ್ಷಗಳಿಂದ ಮಹಿಳೆ ಮೇಲೆ 92 ಬಾರಿ ಅತ್ಯಾಚಾರ ಎಸಗಲಾಗಿದೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ 26-73 ವಯೋಮಾನದ 51 ಮಂದಿಯನ್ನು ಬಂಧಿಸಿದ್ದು, 41 ಜನರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ಧಾರೆ.
ಮಹಿಳೆಯ ಪತಿ ಡೊಮಿನಿಕ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆಕೆ ಸೇವಿಸುವ ಆಹಾರದಲ್ಲಿ ಆ್ಯಂಟಿ-ಆಂಗ್ಸೈಟಿ ಡ್ರಗ್ ಲೊರಾಜೆಪಮ್ ಬೆರಸುತ್ತಿದ್ದ. ಬಳಿಕ ಪರಪುರುಷರನ್ನು ತಮ್ಮ ಮನೆಗೆ ಕರೆಸಿಕೊಳ್ಳುತ್ತಿದ್ದ. ಬಳಿಕ ಆರೋಪಿಯೂ ಕೃತ್ಯವನ್ನು ಸೆರೆಹಿಡಿದು ABUSES ಎಂಬ ಫೈಲ್ನಲ್ಲಿ ಸ್ಟೋರ್ ಮಾಡುತ್ತಿದ್ದ. ಘಟನೆಯೂ 2011-2020ರ ಅವಧಿಯಲ್ಲಿ ನಡೆದಿದೆ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಆರೋಪಿ ಡೊಮಿನಿಕ್ ಮೊದಲಿಗೆ ವೆಬ್ಸೈಟ್ ಒಂದರಲ್ಲಿ ಡ್ರಗ್ಸ್ ಸೇವಿಸಿದವರ ಜೊತೆಗೆ ಅಸಹಜ ಲೈಂಗಿಕ ಕ್ರಿಯೆ ನಡೆಸುವ ಬಗ್ಗೆಗಿನ ಚರ್ಚೆಯಲ್ಲಿ ಭಾಗಿಯಾಗಿದ್ದ. ಇದಾದ ಬಳಿಕ ಆರೋಪಿಯೂ ಇದರಿಂದ ಉತ್ತೇಜನಗೊಂಡು ತನ್ನ ಹೆಂಡತಿಯ ಮೇಲೆ ಡ್ರಗ್ಸ್ ಪ್ರಯೋಗಿಸಿ ಆಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ.
ಆರೋಪಿಯ ಪತ್ನಿಯೂ ರೂಮಿನಲ್ಲಿ ಕ್ಯಾಮರಾ ಇರುವುದನ್ನು ತೆರೆದು ಗಮನಿಸಿದಾಗ ಕೃತ್ಯ ಬಳಕಿಗೆ ಬಂದಿದೆ. ಈ ಬಗ್ಗೆ ತನ್ನ ಪತ್ನಿ ಆತನನ್ನು ವಿಚಾರಿಸಿದ್ದು, ತಪ್ಪೊಪ್ಪಿಕೊಂಡಿದ್ಧಾನೆ. ಸಂತ್ರಸ್ತ ಮಹಿಳೆಯೂ ತನ್ನ ಪತಿ ಹಾಗೂ ಅತ್ಯಾಚಾರ ಎಸಗಿದ 92 ಪುರುಷರ ವಿರುದ್ಧ ದೂರು ದಾಖಲಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ಧಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.