ಕ್ಯಾನ್ಸರ್​ನಿಂದ ಬಳಲುತ್ತಿದ್ದ ನಾಯಿಯನ್ನು ಟ್ರಿಪ್​ ಕರೆದೊಯ್ದು ಅಂತಿಮ ಆಸೆ ಪೂರೈಸಿದ ಮಾಲೀಕ

dog
Published on

ಲಂಡನ್: ನಾಯಿಗಳನ್ನು ಮಕ್ಕಳಂತೆ ಸಾಕುವವರು ಅನೇಕರಿದ್ದಾರೆ. ಅದೇ ರೀತಿ ಇಲ್ಲೊಬ್ಬ ನಾಯಿ ಮಾಲೀಕ ತನ್ನ ನಾಯಿ ಮೇಲಿದ್ದ ಪ್ರೀತಿಗಾಗಿ ಮಾಡಿದ ಕೆಲಸವನ್ನು ಕೇಳಿದರೆ ನಿಜಕ್ಕೂ ನಿಮ್ಮ ಕಣ್ಣು ತುಂಬಿ ಬರುತ್ತದೆ.

ಲಂಡನ್​ನ ಕಾರ್ಲೋಸ್ ಫ್ರೆಸ್ಕೊ, ಮಾಂಟಿ ಹೆಸರಿನ ನಾಯಿಯನ್ನು ಸಾಕಿದ್ದಾನೆ. 10 ವರ್ಷಗಳಿಂದ ಜತೆಯಿದ್ದ ಮಾಂಟಿಗೆ ಕಳೆದ ವರ್ಷದ ರಕ್ತದ ಕ್ಯಾನ್ಸರ್​ ಕಾಣಿಸಿಕೊಂಡಿದೆ. ಅದನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕೀಮೋಥೆರಪಿ ಮಾಡಿ ಮಾಂಟಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ಆದರೆ ಇತ್ತೀಚೆಗೆ ಮಾಂಟಿಯ ಆರೋಗ್ಯ ಇನ್ನಷ್ಟು ಹದಗೆಟ್ಟಿದ್ದು, ಬದುಕುವುದಿಲ್ಲ ಎಂದು ವೈದ್ಯರ ಹೇಳಿದ್ದಾರೆ.

ಮಾಂಟಿ ಇನ್ನೇನು ಕೆಲವೇ ದಿನಗಳಲ್ಲಿ ಸಾಯುತ್ತಾನೆ ಎಂದು ತಿಳಿದ ನಂತರ ಕಾರ್ಲೋಸ್​ ಆತನನ್ನು ಚೆನ್ನಾಗಿ ನೋಡಿಕೊಳ್ಳುವ ನಿರ್ಧಾರ ಮಾಡಿದ್ದಾನೆ. ಯಾವಾಗಲೂ ತಾವಿಬ್ಬರು ಹೋಗುತ್ತಿದ್ದ ದಕ್ಷಿಣ ವೇಲ್ಸ್‌ನ ಅತ್ಯುನ್ನತ ಶಿಖರವಾದ ಪೆನ್ ವೈ ಫ್ಯಾನ್​ಗೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದಾನೆ. ತಳ್ಳಿಕೊಂಡು ಹೋಗಬಲ್ಲ ಗಾಡಿಯನ್ನು ತೆಗೆದುಕೊಂಡು ಅದರಲ್ಲಿ ಮಾಂಟಿಯನ್ನು ಕೂರಿಸಿಕೊಂಡು ಶಿಖರ ಹತ್ತಲು ಆರಂಭಿಸಿದ್ದಾನೆ.

ಶಿಖರವನ್ನು ಹತ್ತುವಾಗ ಅನೇಕ ಪ್ರವಾಸಿಗರು ಮಾಂಟಿಯ ಕಥೆ ಕೇಳಿದ್ದಾರೆ. ಆತನನ್ನು ಮೇಲೆ ಹತ್ತಿಸಲು ಸಹಾಯ ಮಾಡಿದ್ದಾರೆ. ಇನ್ನೇನು ಕೊನೆಯುಸಿರೆಳೆಯಲಿರುವ ನಾಯಿ ಎಂದು ತಿಳಿದು ಕಣ್ಣೀರೂ ಹಾಕಿದ್ದಾರಂತೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net