ರೀಲ್ಸ್​ಗಾಗಿ ಸ್ವಿಮ್ಮಿಂಗ್​ ಫೂಲ್​ನಲ್ಲಿ ರಿವರ್ಸ್​ ಡೈ ಹೊಡೆದ ವ್ಯಕ್ತಿ: ನಿನಗಿದು ಬೇಕಿತ್ತಾ ಎಂದ ನೆಟ್ಟಿಗರು..ಕಡೆಗೆ ಏನಾಯ್ತು ನೋಡಿ!

swimming (1)
Published on

ನವದೆಹಲಿ: ಕೆಲವರು ಎಲ್ಲರ ಮುಂದೆ ಹೀರೋ ಅಂತ ಬಿಲ್ಡಪ್ ಕೊಡಲು ಹೋಗಿ ಕೊನೆಗೆ ತಾವೇ ಆಪತ್ತು ತಂದುಕೊಳ್ಳುತ್ತಾರೆ. ಇದಕ್ಕೆ ತಾಜಾ ಉದಾಹರಣೆಯೊಂದು ಇಲ್ಲಿದೆ. ವ್ಯಕ್ತಿಯೊಬ್ಬ ಈಜುಕೊಳಕ್ಕೆ ಸ್ನಾನ ಮಾಡಲು ಹೋಗಿದ್ದ. ಆಗ ರೀಲ್ ಮಾಡಿ ವೈರಲ್ ಆಗಲು ನಿರ್ಧರಿಸಿ ರಿವರ್ಸ್​ ಡೈ(ಹಿಂಬದಿ ಪಲ್ಟಿ )ಹಾಕಿ ಕಡೆಗೆ ಈಜುಕೊಳ, ದಡದ ಮಧ್ಯದ ಹಲಗೆಗೆ ಸಿಲುಕಿಕೊಂಡಿದ್ದಾನೆ. ಸಧ್ಯಕ್ಕೆ ಈ ವೀಡಿಯೋ ವೈರಲ್​ ಆಗುತ್ತಿದೆ.

ಆ ವ್ಯಕ್ತಿ ಮರದ ದಿಮ್ಮಿಗಳ ಮೇಲೆ ನಿಂತು ಹಿಮ್ಮುಕವಾಗಿ ಪಲ್ಟಿ ಹೊಡೆದು ಈಜುಕೊಳಕ್ಕೆ ಜಿಗಿದಿದ್ದಾನೆ. ಆದರೆ ನೀರಿಗೆ ಬೀಳುವ ಬದಲಾಗಿ ಮರದ ಹಲಗೆಗಳ ನಡುವೆ ಬಿದ್ದಿದ್ದಾನೆ. ತಲೆ ಒಳಗೆ ಸಿಲುಕಿಕೊಂಡಿದ್ದರಿಂದ ಹೊರಗೆ ಬರಲು ಸಾಧ್ಯವಾಗಲಿಲ್ಲ. ಆತ ಹೀಗೆ ಸಿಲುಕಿಕೊಂಡಿರುವುದನ್ನು ನೋಡಿ ಅಲ್ಲಿದ್ದವರು ಧಾವಿಸಿ ರಕ್ಷಿಸಲು ಯತ್ನಿಸಿದರು. ಇದರೊಂದಿಗೆ ಈ ವಿಡಿಯೋ ಮುಗಿಯುತ್ತದೆ.

ರೀಲ್ಸ್​ ಮಾಡಲು ಹೋಗಿ ಆಪತ್ತಿಗೆ ಸಿಲುಕಿದ ಈ ವ್ಯಕ್ತಿಯ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟಿಜನ್‌ಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು, "ಇದು ಈ ರೀತಿ ವೈರಲ್ ಆಗುವುದನ್ನು ನಾನು ನಿರೀಕ್ಷಿಸಿರಲಿಲ್ಲ" ಎಂದು ಹೇಳಿದರು. ಇನ್ನೂ ಕೆಲವರು "ಇದು ನಿನಗೆ ಬೇಕಿತ್ತಾ" ಎಂದಿದ್ದಾರೆ. ಈ ವೀಡಿಯೊ ಪ್ರಸ್ತುತ 2.40 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಹೊಂದಿ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net