

ಜಕಾರ್ತಾ: ಹಾವು ಎಂದಾಕ್ಷಣ ಮಾರುದ್ದ ಓಡುತ್ತೇವೆ. ಈ ಪದ ಕೇಳಿದರೆ ಸಾಕು ಎಲ್ಲಿಲ್ಲದ ಭಯ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಮಾತ್ರ ಹಾವು ಕಂಡರೆ ಭಯವೇ ಇಲ್ಲ.
ಮಲೇಶಿಯಾದ ಈ ವ್ಯಕ್ತಿ ಭಾರೀ ಗಾತ್ರದ ಎರಡು ಹೆಬ್ಬಾವನ್ನು ತನ್ನ ಹೆಗಲಮೇಲಿಟ್ಟು ಡ್ಯಾನ್ಸ್ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ವಿಶ್ವದಲ್ಲೇ ಅತಿ ಹೆಚ್ಚು ಉದ್ದವಿರುವ ಭಾರೀ ಗಾತ್ರದ ಹೆಬ್ಬಾವು ಇವಾಗಿದ್ದು, ಈ ವ್ಯಕ್ತಿಯು ಅವುಗಳನ್ನು ಎತ್ತುಕೊಂಡು ಹೆಗಲಮೇಲೆ ಹಾಕಿಕೊಂಡು ಕುಣಿಯುತ್ತಾನೆ. ಅದರಂತೆ ಹೆಬ್ಬಾವು ಕೂಡ ಏನೂ ಮಾಡುವುದಿಲ್ಲ. ಈ ದೃಶ್ಯ ನೋಡಿದರೇ ಮೈಯೆಲ್ಲಾ ನಡುಗುವುದಂತು ಸತ್ಯ.
ಇದೇ ವ್ಯಕ್ತಿ ಇತ್ತೀಚೆಗೆ ನಾಗರಹಾವಿನ ತಲೆಯ ಮೇಲೆ ಮುತ್ತು ಕೊಡುತ್ತಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಏನೇ ಆದರೂ ಈ ವ್ಯಕ್ತಿ ಹಾವಿನ ಜತೆ ಈ ರೀತಿ ಆಟವಾಡುವುದು ಪ್ರಾಣದ ಜತೆ ಚೆಲ್ಲಾಟವಾಡಿದಂತೆಯೇ ಸರಿ.