ಪತ್ನಿಯ ಜಡೆ ಕತ್ತರಿಸಿದ ಪತಿ! ಪೊಲೀಸ್ ಠಾಣೆಯಲ್ಲಿ ದೂರು ದಾಖಲು.. man cuts off wife braid

cut hair
Published on

ಉತ್ತರಪ್ರದೇಶ :  ( man cuts off wife braid ) ಉತ್ತರ ಪ್ರದೇಶದ ಹಾರ್ದೋಯ್ ಜಿಲ್ಲೆಯಲ್ಲಿ ಬ್ಯೂಟಿ ಪಾರ್ಲರ್‌ನಲ್ಲಿದ್ದಾಗ ಪತ್ನಿಯ ಜಡೆ ಕತ್ತರಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಶನಿವಾರ ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ಘಟನೆಯ ನಂತರ ಮಹಿಳೆಯ ತಂದೆ ರಾಧಾಕೃಷ್ಣ ಅವರು ಆಕೆಯ ಪತಿ ರಾಮಪ್ರತಾಪ್ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ತಮ್ಮ ಮಗಳು ಸುಮಾರು ಒಂದು ವರ್ಷದ ಹಿಂದೆ ರಾಮಪ್ರತಾಪ್ ಅವರನ್ನು ವಿವಾಹವಾಗಿದ್ದರು ಎಂದು ರಾಧಾಕೃಷ್ಣ ಹೇಳಿದ್ದಾರೆ. ಮದುವೆಯಾದಾಗಿನಿಂದ, ಮಗಳಿಗೆ ರೆಫ್ರಿಜರೇಟರ್ ಮತ್ತು ಕೂಲರ್ ಸೇರಿದಂತೆ ವರದಕ್ಷಿಣೆಗಾಗಿ ಅತ್ತೆ ಮಾವ ನಿರಂತರವಾಗಿ ಕಿರುಕುಳ ನೀಡುತ್ತಿದ್ದ.ಘಟನೆ ನಡೆಯುವ ಒಂದು ವಾರದ ಮೊದಲು, ರಾಧಾಕೃಷ್ಣ ತನ್ನ ಮಗಳನ್ನು ಮನೆಗೆ ಕರೆತಂದಿದ್ದ.

ಅಳಿಯ ರಾಮಪ್ರತಾಪ್ ಮೂವರು ಸಹಚರರೊಂದಿಗೆ ಬ್ಯೂಟಿ ಪಾರ್ಲರ್‌ಗೆ ಬಂದು ತನ್ನ ಮಗಳ ಜಡೆ ಕತ್ತರಿಸಿದ್ದಾರೆ.ವರದಕ್ಷಿಣೆ ಕಿರುಕುಳಕ್ಕೆ ಜಡೆ ಕತ್ತರಿಸಲಾಗಿದೆ ಎಂದು ತಂದೆ ಹೇಳಿಕೊಂಡಿದ್ದಾರೆ.

ಸ್ಥಳೀಯರ ಪ್ರಕಾರ, ಐಬ್ರೋ ಮಾಡಿಕೊಳ್ಳಲು ಪತ್ನಿ ಬ್ಯೂಟಿ ಪಾರ್ಲರ್‌ಗೆ ಭೇಟಿ ನೀಡಿದ್ದರಿಂದ ರಾಮಪ್ರತಾಪ್ ಕೋಪಗೊಂಡಿದ್ದರು, ಇದು ಅವರ ಕ್ರಮಕ್ಕೆ ಕಾರಣವಾಯಿತು ಎನ್ನುತ್ತಾರೆ.

ಪಾರ್ಲರ್‌ಗೆ ಹೋಗಿದ್ದಕ್ಕಾಗಿ ಅವಳನ್ನು ಈ ರೀತಿ ಅವಮಾನಿಸುವುದು ಕ್ರೂರ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಇದು ವರದಕ್ಷಿಣೆ ಕಿರುಕುಳದ ಭಾಗ ಎಂದು ನಂಬುತ್ತಾರೆ. ಏನೇ ಇರಲಿ, ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net