ಬಿರಿಯಾನಿ ತಿನ್ನುವಾಗ ಗಂಟಲಲ್ಲಿ ಚಿಕನ್‌ ಪೀಸ್‌ ಸಿಲುಕಿ  ಉಸಿರುಗಟ್ಟಿ  ವ್ಯಕ್ತಿ ಸಾವು

biryani
ಸಾಂದರ್ಭಿಕ ಚಿತ್ರ
Published on

ಹೈದರಬಾದ್‌:  ವ್ಯಕ್ತಿಯೊಬ್ಬರು ಬಿರಿಯಾನಿ ತಿನ್ನುವಾಗ ಗಂಟಲಿನಲ್ಲಿ ಚಿಕನ್‌ ಪೀಸ್‌ ಸಿಲುಕಿ ಉಟಿರುಗಟ್ಟಿ ಸಾವನ್ನಪ್ಪಿದ್ದಾರೆ.  ಹೈದರಬಾದ್‌ನಲ್ಲಿ ಈ ಆಘಾತಕಾರಿ ಘಟನೆಯೊಂದು ನಡೆದಿದೆ.

ಅಣ್ಣಾರಾಮ್‌ ಗ್ರಾಮದ ನಿವಾಸಿ ಶ್ರೀಕಾಂತ್‌ (39 ವರ್ಷ) ಮೃತ. ಬಿರಿಯಾನಿ ತಿನ್ನುವಾಗ ಗಂಟಲಲ್ಲಿ ಚಿಕನ್‌ ಪೀಸ್‌ ಸಿಲುಕಿದ ಪರಿಣಾಮ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಶ್ರೀಕಾಂತ್‌ ತನ್ನ ಸಹೋದರಿಯನ್ನು ಭೇಟಿ ಮಾಡಲೆಂದು ಹೈದರಬಾದಿಗೆ ತೆರಳಿದ್ದ. ಆ ಸಂದರ್ಭದಲ್ಲಿ ಅಲ್ಲೇ ಒಂದು ಬಾರ್‌ಗೆ ಹೋಗಿ ಮದ್ಯ ಮತ್ತು ಚಿಕನ್‌ ಬಿರಿಯಾನಿ ಸೇವನೆ ಮಾಡಿದ್ದಾನೆ. ಆ ಸಂದರ್ಭದಲ್ಲಿ ಅವರಿಗೆ ಉಸಿರುಗಟ್ಟಿದಂತಾಗಿ  ತೀವ್ರ ಉಸಿರಾಟದ ತೊಂದರೆಯುಂಟಾಗಿ ಅಲ್ಲೇ ಕುಸಿದು ಬಿದ್ದಿದ್ದಾರೆ. ಆ ತಕ್ಷಣ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ.

ಪೊಲೀಸರು ಶ್ರೀಕಾಂತ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ದುರಾದೃಷ್ಟವಶಾತ್‌ ಚಿಕಿತ್ಸೆಗೂ ಮುನ್ನವೇ ಅವರು ಸಾವನ್ನಪ್ಪಿದ್ದಾರೆ.   ಮರಣೋತ್ತರ ಪರೀಕ್ಷೆಯಲ್ಲಿ  ಗಂಟಲಲ್ಲಿ ಮಾಂಸದ ತುಂಡು ಸಿಕ್ಕಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net