ಎರಡನೇ ಮದುವೆಯಾಗಿ ಮಕ್ಕಳನ್ನು ಕರ್ಕೊಂಡು ಹೋಗು ಅಂದ ಮಾವನ ತಲೆಯನ್ನೆ ಕತ್ತರಿಸಿದ ಅಳಿಯ!

Crime 16 April 20
Published on

ಅಮರಾವತಿ: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಅಳಿಯ - ಮಾವನ ಮಧ್ಯೆ ನಡೆದ ವಾಗ್ವಾದ ಅಳಿಯನ ಶಿರಚ್ಛೇದದ ನಂತರ ಕೊನೆಗೊಂಡಿದೆ. ಭಾನುವಾರ ಬೆಳಗ್ಗೆ 11.30 ಕ್ಕೆ ಅಳಿಯನ ಶಿರಚ್ಛೇದ ಮಾಡಿ ತಲೆಯನ್ನು ಅನ್ನಾವರಮ್ ಪೊಲೀಸ್ ಠಾಣೆಗೆ ಹೊತ್ತೊಯ್ದಿದ್ದಾನೆ.
ಪಂಪನಪೊಯಿನಾ ಲಕ್ಷ್ಮಣ್ ಮೃತ ಪಟ್ಟವ. ಆತನ ಹೆಂಡತಿ ಪಾವನಿ 10 ತಿಂಗಳ ಹಿಂದೆ ಸಾವಿಗೀಡಾಗಿದ್ದಳು.. ಆಗಸ್ಟ್ 8 ರಂದು, ಆತ ಹೆಂಡತಿಯ 10 ತಿಂಗಳ ಪುಣ್ಯಸ್ಮರಣೆ ಆಚರಣೆಗೆಂದು ಧಾರಾ ಜಗನ್ನಾಧಪುರಂ ಗ್ರಾಮಕ್ಕೆ ಮಾವ ಪಲ್ಲಾ ಸತ್ಯನಾರಾಯಣನ ಗೆ ಬಂದಿದ್ದ.

ಮರುದಿನ ಬೆಳಿಗ್ಗೆ, ಸತ್ಯನಾರಾಯಣ ಮತ್ತು ಲಕ್ಷ್ಮಣರ ನಡುವೆ ವಾದವು ಭುಗಿಲೆದ್ದಿತು. ಬಾಲಕಿಯರಿಬ್ಬರು ತಮ್ಮ ತಾಯಿಯ ನಿಧನದ ನಂತರ ತಮ್ಮ ಅಜ್ಜನೊಂದಿಗೆ ವಾಸಿಸುತ್ತಿದ್ದರು. ಈಗ ಮಕ್ಕಳನ್ನು ತನ್ನೊಂದಿಗೆ ಕರೆದೊಯ್ಯಬೇಕೆಂದು ಮಾವ ಅಳಿಯನಿಗೆ ಒತ್ತಾಯಿಸಿದ್ದ. ಆದರೆ ಆ ಮಕ್ಕಳನ್ನು ನೋಡಿಕೊಳ್ಳಲು ಮತ್ತೊಂದು ಮದುವೆ ಏರ್ಪಾಡು ಮಾಡುವಂತೆ ಮಾವನಿಗೆ ಅಳಿಯ ಹೇಳಿದ. ಈ ಪ್ರಸ್ತಾಪವನ್ನು ಮಾವ ತೀವ್ರವಾಗಿ ವಿರೋಧಿಸಿದ್ದ. ವಾಗ್ವಾದ ತಾರಕ್ಕೇರಿತು ಎಂದು ಅನ್ನಾವರಂ ಪೊಲೀಸರು ತಿಳಿಸಿದ್ದಾರೆ.
ವಾಗ್ವಾದ ತೀವ್ರಗೊಂಡಂತೆ ಉದ್ರಿಕ್ತನಾಗಿದ್ದ ಮಾವ ಅಳಿಯನ ಶಿರಚ್ಛೇದ ಮಾಡಿದ್ದಾನೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net