ರಷ್ಯಾದಿಂದ ಅಕ್ಕನ ಮನೆಗೆ ಬಂದಾತ ನ್ಯಾಯಾಂಗ ಬಂಧನಕ್ಕೆ; ಅನ್ಯಧರ್ಮೀಯನೊಂದಿಗೆ ಪ್ರಯಾಣಿಸುತ್ತಿದ್ದ ಮುಸ್ಲಿಂ ಯುವತಿಗೆ ನಿಂದನೆ…

banagalore
Published on

ಬೆಂಗಳೂರು: ರಷ್ಯಾದಲ್ಲಿ ಮೆಡಿಕಲ್ ಶಿಕ್ಷಣ ಪಡೆಯುತ್ತಿದ್ದ ಈತ, ರಜೆಯ, ಮೇಲೆ ಭಾರತಕ್ಕೆ ಬಂದು ಬೇರೆಯವರ ವಿಚಾರಕ್ಕೆ ಮೂಗು ತೂರಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಅಂದಹಾಗೆ ಈತ ಮಾಡಿದ್ದು ಯುವತಿಯೋರ್ವಳ ನಿಂದನೆ.

ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ನಂತರ ಪೂರ್ವ ವಿಭಾಗದ ಸೆನ್ ಠಾಣೆ ಪೊಲೀಸರು ಆರೋಪಿಯ ಬಂಧನ ಮಾಡಿದ್ದಾರೆ. ಈತ ಅನ್ಯ ಧರ್ಮದ ಹುಡುಗನ ಜತೆ ಹೋಗುತ್ತಿದ್ದಕ್ಕೆ ನಿಂದಿಸಿ ವಿಡೀಯೋ ಮಾಡಿದ್ದು ಈ ಕುರಿತಾಗಿ ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಟ್ವಿಟ್ ಮಾಡಿದ್ದರು. ಸದ್ಯ ಸೆನ್ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಅಸಲಿಗೆ ಆಗಿದ್ದೇನು?

ಬಂಧಿತ ಆರೋಪಿಯನ್ನು ಜಾಕೀರ್ ಎಂದು ಗುರುತಿಸಲಾಗಿದೆ. ಕೋಲಾರ ಜಿಲ್ಲೆ ಬಂಗಾರಪೇಟೆ ಮೂಲದ ಆರೋಪಿ ಜಾಕೀರ್ ಅಹಮದ್ ರಷ್ಯಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ. ಈತ ರಜೆ ಎಂದು ಬೆಂಗಳೂರಿನ ಗೋವಿಂದಪುರದ ತನ್ನ ಅಕ್ಕನ ಮನೆಗೆ ಬಂದಿದ್ದ. ಅಕ್ಕನ ಮನೆಗೆ ಬಂದಿದ್ದ ಜಾಕೀರ್ ಅಹಮದ್.

ಈತ ಅನ್ಯಧರ್ಮಿಯ ಯುವಕನ ಜೊತೆಗೆ ಬುರ್ಖಾ ಧರಿಸಿದ ಯುವತಿ ಹೋಗುತ್ತಿರುವುದು ಕಂಡಿದ್ದ. ನಂತರ ಬೈಕ್ ಅಡ್ಡಗಟ್ಟಿ ಯುವತಿ ಜೊತೆ ಗಲಾಟೆ ಮಾಡಿ ಯುವತಿಗೆ ನಿಂದಿಸಿದ್ದಾನೆ. ಈ ಸಂದರ್ಭದಲ್ಲಿ ಬುರ್ಖಾ ತೆಗೆಯುವಂತೆ ಕೆಟ್ಟದಾಗಿ ನಿಂದಿಸಿದ್ದ. ಆದರೆ ಯುವತಿ ಮತ್ತು ಬೈಕ್ನಲ್ಲಿದ್ದ ಯುವಕ ಇಬ್ಬರೂ ಪರಿಚಿತರಾಗಿದ್ದರು. ಇಬ್ಬರೂ ಕಂಪನಿಯೊಂದರ ಇಂಟರ್ ವ್ಯೂಗೆ ಹೋಗಿದ್ದರು.

ವಾಪಾಸು ಬರುವಾಗ ಯುವತಿಯನ್ನು ಬೈಕ್ನಲ್ಲಿ ಮನೆಗೆ ಡ್ರಾಪ್ ಮಾಡಲು ಯುವಕ ತೆರಳುತ್ತಿದ್ದ. ಸದ್ಯ ಯುವತಿಗೆ ನಿಂದಿಸಿದ ಜಾಕೀರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net