ತಂದೆಯಿಂದಲೇ ನಾಲ್ವರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ: ಪ್ರಕರಣ ಬಯಲಿಗೆಳೆದಿದ್ದೇ 10 ವರ್ಷದ ಮಗಳು

Rape
Published on

ಕೊಚ್ಚಿನ್​: ತನ್ನ ನಾಲ್ವರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕೇರಳ ಪೊಲೀಸರು 47 ವರ್ಷದ ವ್ಯಕ್ತಿಯೊಬ್ಬನನ್ನು ಶನಿವಾರ ಬಂಧಿಸಿದ್ದಾರೆ.

ಆರೋಪಿಯು ದಿನಗೂಲಿ ನೌಕರನಾಗಿದ್ದಾನೆ. ಮದ್ಯವ್ಯಸನಿಯಾಗಿರುವ ಆತ ತನ್ನ ಕುಟುಂಬದೊಂದಿಗೆ ವಾಲಂಚೇರಿಯಲ್ಲಿ ವಾಸವಿದ್ದ.

ಈತನ ನಾಲ್ವರು ಹೆಣ್ಣು ಮಕ್ಕಳು 17, 15, 13 ಮತ್ತು 10 ವರ್ಷ ವಯೋಮಾನದವರು ಎಂದು ತಿಳಿದುಬಂದಿದೆ. ಇವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ವೈದ್ಯಕೀಯ ಪರೀಕ್ಷೆಯಲ್ಲಿಯೂ ಧೃಡಪಟ್ಟಿದೆ. ಬಳಿಕ ಹೇಳಿಕೆ ಪಡೆಯಲು ಮ್ಯಾಜಿಸ್ಟ್ರೇಟ್​ ಮುಂದೆ ಅವರನ್ನು ಹಾಜರು ಪಡಿಸಲಾಯಿತು.

ಹತ್ತು ವರ್ಷದ ಮಗಳು ತಂದೆಯ ನೀಚ ಕೃತ್ಯವನ್ನು ಮೊದಲು ಬಯಲಿಗೆಳೆದಿದ್ದಾಳೆ. ಮೊದಲು ಶಾಲಾ ಶಿಕ್ಷಕರ ಮುಂದೆ ಕರಾಳ ಘಟನೆಯನ್ನು ಹೆಣ್ಣು ಮಗಳು ವಿವರಿಸಿದ್ದಾಳೆ. ಬಳಿಕ ನಾಲ್ವರು ಹೆಣ್ಣು ಮಕ್ಕಳನ್ನು ಸಮಾಲೋಚನೆ ನಡೆಸಿದಾಗ ತಂದೆಯ ಕೃತ್ಯವನ್ನು ಬಹಿರಂಗಪಡಿಸಿದ್ದಾರೆ.

ಬಳಿಕ ಶಾಲಾ ಆಡಳಿತ ಮಂಡಳಿ, ಹತ್ತಿರದ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ ಬಳಿಕ ಆರೋಪಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net