ಭಿಕ್ಷುಕನೊಂದಿಗೆ 6 ಮಕ್ಕಳ ತಾಯಿ ಪರಾರಿ ಕೇಸ್​; Police ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ಸತ್ಯ

Elope
Published on

ಲಖನೌ: ಉತ್ತರಪ್ರದೇಶದ ಹರ್ದೋಯಿಯಲ್ಲಿ ಮಹಿಳೆಯೊಬ್ಬರು ತನ್ನ ಆರು ಮಕ್ಕಳು ಹಾಗೂ ಪತಿಯನ್ನು ಬಿಟ್ಟು ಭಿಕ್ಷುಕನ ಜತೆ ಓಡಿ ಹೋಗಿದ್ದು, ಈ ವಿಚಾರ ರಾಷ್ಟ್ರವ್ಯಾಪಿ ಸದ್ದು ಮಾಡಿತ್ತು. ಹೆಂಡತಿ ಓಡಿ ಹೋದ ಸಂಬಂಧ ಪತಿ ಪೊಲೀಸರಿಗೆ (Police) ದೂರು ನೀಡಿದ್ದರು. ಇದೀಗ ಪ್ರಕರಣ ನಾಟಕೀಯ ತಿರುವು ಪಡೆದುಕೊಂಡಿದ್ದು, ಮಹಿಳೆ ಭಿಕ್ಷುಕನ ಜತೆ ಓಡಿ ಹೋಗಿಲ್ಲವೆಂಬ ವಿಚಾರ ರಿವೀಲ್​ ಆಗಿದ್ದು, ಮಹಿಳೆ ಮನೆ ಬಿಟ್ಟು ಹೋಗಿದರ ಹಿಂದಿನ ಅಸಲಿ ಕಾರಣ ರಿವೀಲ್​ ಆಗಿದೆ.

ಹರ್ದೋಯಿ ಜಿಲ್ಲೆಯಲ್ಲಿ 36 ವರ್ಷದ ಮಹಿಳೆ ರಾಜೇಶ್ವರಿ ಜನವರಿ 03ರಂದು ಮನೆ ಬಿಟ್ಟು ಹೋಗಿದ್ದರು. ಮನೆ ಬಿಟ್ಟು ಹೋಗಿದ್ದರ ಸಂಬಂಧ ಪತಿ ರಾಜು ಪೊಲೀಸ್​ ಠಾಣೆಯಲ್ಲಿ ತನ್ನ ಪತ್ನಿ ಭಿಕ್ಷುಕರೊಬ್ಬರ ಜೊತೆ ಎಮ್ಮೆ ಮಾರಿದ್ದ ದುಡ್ಡನ್ನು ಕದ್ದು ಪರಾರಿಯಾಗಿದ್ದಾಳೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಇದೀಗ ಈ ವಿಚಾರ ತಿಳಿದ ಪತ್ನಿ ಪೊಲೀಸರ ಮುಂದೆ ಹಾಜರಾಗಿದ್ದು, ತಾನು ಮನೆ ಬಿಟ್ಟು ಹೋಗಲು ಕಾರಣವನ್ನು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಹರ್ದೋಯಿ ವಿಭಾಗದ ಪೊಲೀಸ್​ ಅಧಿಕಾರಿಯೊಬ್ಬರು, ರಾಜೇಶ್ವರಿ ಜನವರಿ 03ರಂದು ತಮ್ಮ ಮಗಳ ಬಳಿ ಮಾರುಕಟ್ಟೆಗೆ ಹೋಗಿ ಬಟ್ಟೆ ಹಾಗೂ ತರಕಾರಿ ತರುವುದಾಗಿ ಹೇಳಿ ಹೋದವರು ವಾಪಸ್​ ಬಂದಿರಲಿಲ್ಲ. ಪತ್ನಿ ಮನೆಗೆ ಬಾರದಿರುವುದರಿಂದ ಕಂಗಾಲಾದ ಪತಿ ಆಕೆ ಭಿಕ್ಷುಕನೊಂದಿಗೆ ದುಡ್ಡಿನ ಸಮೇತ ಓಡಿ ಹೋಗಿರುವುದಾಗಿ ಹೇಳಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ FIR ದಾಖಲಾಗಿರುವ ವಿಚಾರ ತಿಳಿದ ಮಹಿಳೆ ಪೊಲೀಸರ ಎದುರು ಹಾಜರಾಗಿದ್ದು, ನಡೆದ ಘಟನೆಯನ್ನು ವಿವರಿಸಿದ್ದಾರೆ.

ಮಹಿಳೆ ಫರೂಕಾಬಾದ್​ನಲ್ಲಿರುವ ತಮ್ಮ ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದಾಗಿ ಹೇಳಿದ್ದು, ತಾನು ಭಿಕ್ಷುಕನೊಟ್ಟಿಗೆ ಓಡಿ ಹೋಗಿರಲಿಲ್ಲ ಎಂದು ತಿಳಿಸಿದ್ದಾರೆ. ತನ್ನ ಪತಿಯ ಕಿರುಕುಳ ತಾಳಲಾರದೆ ಅವರು ಮನೆ ಬಿಟ್ಟು ಸಂಬಂಧಿಕರ ಮನೆಗೆ ಹೋಗಿದ್ದಾಗಿ ವಿಚಾರಣೆ ವೇಳೆ ಹೇಳಿದ್ದು, ಮನೆಯಲ್ಲಿದ್ದ ಹಣವನ್ನು ತೆಗೆದುಕೊಂಡಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ತನಿಖೆ ನಡೆಯುತ್ತಿದ್ದು, ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ಹರ್ದೋಯಿ ವಿಭಾಗದ ಪೊಲೀಸ್​ ಅಧಿಕಾರಿಯೊಬ್ಬರು ಘಟನೆ ಕುರಿತು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net