70 ವರ್ಷದ ವೃದ್ಧನಿಗೆ ಸಂಗಾತಿ ಬೇಕಾಗಿದ್ದಾಳೆ; ಸ್ಲಿಮ್ ಮಾತ್ರವಲ್ಲ ಬುದ್ಧಿವಂತೆಯೂ ಆಗಿರಬೇಕು...

Billboard To Find Girlfriend
Published on

ನವದೆಹಲಿ: ಪ್ರೀತಿಗೂ, ವಯಸ್ಸಿಗೂ ಸಂಬಂಧವಿಲ್ಲ, ಪ್ರೀತಿಯನ್ನು ಯಾವ ವಯಸ್ಸಿನಲ್ಲಿ ಬೇಕಾದರೂ ಆಗಬಹುದು ಎಂದು ಹೇಳಲಾಗುತ್ತದೆ. ಹೀಗೆ ಇಲ್ಲೊಬ್ಬ 70 ವರ್ಷದ ವೃದ್ಧ ಒಂಟಿಯಾಗಿ ಇರಲು ಸಾಧ್ಯವಾಗದೆ ಇಳಿವಯಸ್ಸಿನಲ್ಲಿ ಸಂಗಾತಿಗಾಗಿ ಹುಡುಕುತಿದ್ದಾನೆ. ಪ್ರೇಯಸಿಯನ್ನು ಹುಡುಕಲು ಜಾಹೀರಾತು ನೀಡಲು ಲಕ್ಷ..ಲಕ್ಷ ಹಣವನ್ನು ಖರ್ಚು ಮಾಡಿ ಸುದ್ದಿಯಾಗಿದ್ದಾನೆ.

70 ವರ್ಷದ ಮುದುಕನ ಹೆಸರು ಅಲ್ ಗಿಲ್ಬರ್ಟಿ. ಅಮೆರಿಕಾದ ಟೆಕ್ಸಾಸ್ ನಿವಾಸಿ. ಒಂಟಿಯಾಗಿರುವುದಕ್ಕೆ ಬೇಸತ್ತು ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದಾನೆ. ಕುತೂಹಲದ ಸಂಗತಿ ಎಂದರೆ ಜೀವನ ಸಂಗಾತಿಗಾಗಿ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಜಾಹೀರಾತು ನೀಡುತಿದ್ದಾನೆ.

ಗಿಲ್ಬರ್ಟಿ ತನ್ನ ಫೋಟೋವನ್ನು 20 ಅಡಿ ಎತ್ತರದ ರಸ್ತೆ ಬದಿಯ ಜಾಹೀರಾತು ಫಲಕದಲ್ಲಿ ಹಾಕಿದ್ದಾರೆ. ಮದುವೆಯಾಗಿ ಸಂಗೀತ ಕಛೇರಿಯನ್ನು ಆನಂದಿಸುವ ಯೋಚನೆಯಲ್ಲಿದ್ದಾರೆ ಎಂದೂ ಬರೆಯಲಾಗಿದೆ. ಜಾಹೀರಾತು ನೀಡಿ ಕೇವಲ ಎರಡು ವಾರಗಳಲ್ಲಿ 400 ಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿದ್ದೇನೆ. 50 ಇಮೇಲ್‌ಗಳನ್ನು ಸಹ ಸ್ವೀಕರಿಸಲಾಗಿದೆ. ಹುಡುಗಿಯರು ತನ್ನನ್ನು ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಗಿಲ್ಬರ್ಟಿ  ಮಾತನಾಡಿ, ಸರಿಯಾದ ಸಂಗಾತಿ ಸಿಕ್ಕರೆ ಆಕೆಗಾಗಿ ಅಮೆರಿಕದಲ್ಲಿ ಎಲ್ಲಿಗೆ ಬೇಕಾದರೂ ಹೋಗುತ್ತೇನೆ. ಜಾಹೀರಾತನ್ನು ನೋಡಿದ ಅನೇಕ ಯುವತಿಯರು ಆತ ತುಂಬಾ ಶ್ರೀಮಂತ ಎಂದು ಭಾವಿಸಿ ಹಣ ಕೇಳುತ್ತಾ ಕರೆ ಮಾಡುತ್ತಾರೆ. ನಾನು ಸರಿಯಾದ ವ್ಯಕ್ತಿಯನ್ನು ಭೇಟಿಯಾಗಲು ಬಯಸುತ್ತೇನೆ. ಆದರೆ ತನ್ನ ಹೃದಯವನ್ನು ಮೆಚ್ಚುವ ಯುವತಿಯಿಂದ ಯಾವುದೇ ಕರೆ ಬಂದಿಲ್ಲ. ನಾನು ಸರಿಯಾದ ವ್ಯಕ್ತಿಯನ್ನು ಭೇಟಿಯಾದರೆ, ನಾನು ಅವಳ ಕಣ್ಣುಗಳನ್ನು ನೋಡಬೇಕು ಮತ್ತು ಅವಳು ಹೇಗೆ ಪ್ರತಿಕ್ರಿಯಿಸುತ್ತಾಳೆಂದು ನೋಡಬೇಕು ಎಂದು 70 ವರ್ಷದ ಈ ಪ್ರೇಮಿ ರೋಮ್ಯಾಂಟಿಕ್ ಆಗಿ ಹೇಳುತ್ತಾರೆ.

ಗಿಲ್ಬರ್ಟ್ ಕೂಡ ತನಗೆ ಎಂತಹ ಹುಡುಗಿ ಬೇಕು ಎಂದು ಹೇಳಿದ್ದಾನೆ. ಸ್ಲಿಮ್ ಆಗಿರಬೇಕು. ಅವರು ಬುದ್ಧಿವಂತ, ನಿಷ್ಠಾವಂತ ಮತ್ತು ಪ್ರಾಮಾಣಿಕ ಸಂಗಾತಿ ಆಗಿರಬೇಕು. ನಿವೃತ್ತಿಯ ನಂತರದ ಆದಾಯವಿದೆ, ವಾರಕ್ಕೆ 320 ಪೌಂಡ್‌ಗಳನ್ನು (ಸುಮಾರು 33 ಸಾವಿರ ರೂಪಾಯಿಗಳು) ಬಿಲ್‌ಬೋರ್ಡ್ ಜಾಹೀರಾತುಗಳಿಗಾಗಿ ಖರ್ಚು ಮಾಡುತ್ತಾರೆ ಎಂದು ಹೇಳಿದರು. ಅಂದರೆ ಗಿಲ್ಬರ್ಟ್ ತನ್ನ ಗೆಳತಿಯ ಜಾಹೀರಾತುಗಳಿಗಾಗಿ ತಿಂಗಳಿಗೆ ಸುಮಾರು 1.25 ಲಕ್ಷ ರೂ. ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net