ಸ್ಕೂಟರ್​ಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಟ್ರಕ್​: ಮಾರುಕಟ್ಟೆಗೆ ಹೋಗ್ತಿದ್ದ ತಾತ-ಮೊಮ್ಮಗ ದುರ್ಮರಣ

Truck Scooter Accident
Published on

ಲಖನೌ: ಸ್ಕೂಟರ್​ಗೆ ಡಿಕ್ಕಿ ಹೊಡೆದ ಟ್ರಕ್​ ಒಂದು ಸುಮಾರು 1 ಕಿ.ಮೀ ದೂರ ಎಳೆದೊಯ್ದ ಪರಿಣಾಮ ತಾತ ಮತ್ತು ಮೊಮ್ಮಗ ದುರಂತ ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಕಾನ್ಪುರ್​-ಸಾಗರ್​ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ.

ತಾತ ಸ್ಥಳದಲ್ಲೇ ಸತ್ತರೆ, 6 ವರ್ಷದ ಮೊಮ್ಮಗನನ್ನು ಸ್ಕೂಟರ್​ ಸಮೇತ ಸುಮಾರು 1 ಕಿ.ಮೀ ದೂರ ಟ್ರಕ್​ ಎಳೆದೊಯ್ದಿದೆ. ದಾರಿಹೋಕರು ಸಾಕಷ್ಟು ಮನವಿ ಮಾಡಿದರೂ ವಾಹನ ನಿಲ್ಲಿಸದ ಟ್ರಕ್​ ಚಾಲಕ ಉದ್ಧಟತನ ಪ್ರದರ್ಶಿಸಿದ್ದಾನೆ. ಕೋಪಗೊಂಡ ಗ್ರಾಮಸ್ಥರು ಕಲ್ಲು ತೆಗೆದು ಟ್ರಕ್​ನತ್ತ ಬೀಸಿದರೂ ನಿಲ್ಲಿಸಲಿಲ್ಲ. ಕೊನೆಗೂ ಹೇಗೋ ಟ್ರಕ್​ ಅನ್ನು ತೆಡೆದು ನಿಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಟ್ರಕ್​ ಅಡಿಯಲ್ಲಿ ಸಿಲುಕಿದ್ದ 6 ವರ್ಷದ ಬಾಲಕನ ಮೃತದೇಹವನ್ನು ವಶಕ್ಕೆ ಪಡೆದರು ಮತ್ತು ಟ್ರಕ್​ ಚಾಲಕನನ್ನು ಬಂಧಿಸಿದರು.

ಮೃತರನ್ನು ತಾತ ಉದಿತ್​ ನಾರಾಯಣ್​ ಛಾನ್ಸುರಿಯಾ ಮತ್ತು ಅವರ ಮೊಮ್ಮಗ ಸಾತ್ವಿಕ್​ ಎಂದು ಗುರುತಿಸಲಾಗಿದೆ. ತಾತ ಮತ್ತು ಮೊಮ್ಮಗ ಮಾರುಕಟ್ಟೆಗೆ ಹೋಗಿವಾಗ ದುರ್ಘಟನೆ ಸಂಭವಿಸಿದೆ. ಚಾಲಕನನ್ನು ಬಂಧಿಸಲಾಗಿದೆ ಎಂದು ಮೊಹೋಬಾ ಪೊಲೀಸರು ತಿಳಿಸಿದ್ದಾರೆ.

ಇಬ್ಬರ ಮೃತದೇಹವನ್ನು ಆ್ಯಂಬುಲೆನ್ಸ್​ ಮೂಲಕ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net