

ಕೋಲ್ಕತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರದಂದು ವಿನೂತನ ರೀತಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದಾರೆ. ಉತ್ತಿಗೆಗೆ ಪ್ಲೇಕಾರ್ಡ್ ನೇತು ಹಾಕಿಕೊಂಡು ಎಲೆಕ್ಟ್ರಿಕ್ ಸ್ಕೂಟರ್ ಸವಾರಿ ಮಾಡಿ ಬಂದಿದ್ದಾರೆ.
ಮಮತಾರನ್ನು ಸಚಿವ ಫಿರ್ಹಾದ್ ಹಕೀಮ್ ಅವರು ಸ್ಕೂಟರ್ನಲ್ಲಿ ಕೂರಿಸಿಕೊಂಡು ಸವಾರಿ ನಡೆಸಿದ್ದಾರೆ. ನಬನ್ನಾದ ಜನರು ಅವರ ಮುಖ್ಯಮಂತ್ರಿಯ ಈ ಹೋರಾಟವನ್ನು ಕಣ್ಣು ತುಂಬಿಸಿಕೊಂಡಿದ್ದಾರೆ. ಮಮತಾ ಅವರು ದಾರಿಯುದ್ದಕ್ಕೂ ರಸ್ತೆ ಬಳಿ ಸೇರಿದ್ದ ಜನರಿಗೆ ಕೈ ಬೀಸುತ್ತಾ ಸಾಗಿದ್ದಾರೆ.
ಮಮತಾ ಅವರು ಕುತ್ತಿಗೆಗೆ ಪ್ಲೇ ಕಾರ್ಡ್ ಒಂದನ್ನು ನೇತು ಹಾಕಿಕೊಂಡಿದ್ದರು. ಅದರಲ್ಲಿ "ನಿಮ್ಮ ಬಾಯಲ್ಲಿ ಏನು ತುಂಬಿಕೊಂಡಿದ್ದೀರಿ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ದರ ಏರಿಕೆಯಾಗುತ್ತಿದೆ" ಎನ್ನುವ ಬರಹವು ಕಂಡುಬಂದಿದೆ. ಸ್ಕೂಟರ್ ಸವಾರಿಯ ನಂತರ ಮಾತನಾಡಿದ ಅವರು ದೇಶದಲ್ಲಿ ಆಗುತ್ತಿರುವ ಇಂಧನ ಬೆಲೆ ಏರಿಕೆಯ ವಿರುದ್ಧದ ಹೋರಾಟವಿದು ಎಂದು ಹೇಳಿಕೊಂಡಿದ್ದಾರೆ.
ದೇಶದಲ್ಲಿ ಮೋದಿ ಸರ್ಕಾರ ಬರುವಾಗ ಬಂದು ಬಂದ ನಂತರ ಇಂಧನ ಬೆಲೆ ಯಾವ ರೀತಿಯಲ್ಲಿ ವ್ಯತ್ಯಾಸವಾಗಿದೆಯನ್ನುವುದನ್ನು ನೀವೇ ನೋಡಬಹುದು. ಮೋದಿ ಮತ್ತು ಅಮಿತ್ ಷಾ ಜೋಡಿ ದೇಶವನ್ನು ಮಾರಾಟ ಮಾಡುತ್ತಿದೆ. ಬಿಜೆಪಿ ದೇಶದ್ರೋಹಿಗಳ ಪಕ್ಷ ಎಂದು ವಾಗ್ವಾದ ನಡೆಸಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ