ಕರೊನಾ ಸಾವಿನ ಮನೆಯಲ್ಲೂ ಶುರುವಾಗಿದೆ ಆಕ್ಸಿಜನ್ ರಾಜಕೀಯ: ಕೇಂದ್ರದ ಮೇಲೆ ದೀದಿಯ ಆರೋಪವೇನು?

Narendra-Modi-Mamata-Banerjee
Narendra-Modi-Mamata-Banerjee
Published on

ನವದೆಹಲಿ: ಕರೊನಾದ ಗಂಭೀರ ಹಂತಕ್ಕೆ ಹೋಗಿರುವ ರೋಗಿಗಳಿಗೆ ಅವಶ್ಯಕವಾಗಿ ಬೇಕಾಗಿರುವ ಆಮ್ಲಜನಕದ್ದೇ ಸದ್ಯ ಈಗ ದೇಶದೆಲ್ಲೆಡೆ ಸುದ್ದಿ. ಇದೇ ವಿಚಾರವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರದ ಮೇಲೆ ಮುಗಿಬಿದ್ದಿದ್ದಾರೆ.

ಪಶ್ಚಿಮ ಬಂಗಾಳಕ್ಕೆ ಸಲ್ಲಬೇಕಿರುವ ಆಕ್ಸಿಜನ್ ಟ್ಯಾಂಕ್​ಗಳನ್ನು ಉತ್ತರಪ್ರದೇಶಕ್ಕೆ ತಿರುಗಿಸಲಾಗುತ್ತಿದೆ ಎಂದು ಆರೋಪಿಸಿರುವ ಮಮತಾ, ಚುನಾವಣೆಗೆ ಮಾತ್ರ ಬಂಗಾಳ ಬೇಕು. ಆಕ್ಸಿಜನ್ ನೀಡಲು ಮಾತ್ರ ಉತ್ತರ ಪ್ರದೇಶ ಬೇಕು. Steel Authority of India ದಿಂದ ಪಶ್ಚಿಮ ಬಂಗಾಳಕ್ಕೆ ಆಕ್ಸಿಜನ್ ಪೂರೈಸಲು ಸೂಚಿಸಲಾಗಿತ್ತು. ಆದರೆ, ಅದನ್ನು ಉತ್ತರ ಪ್ರದೇಶಕ್ಕೆ ಪೂರೈಸಲು ಕೇಂದ್ರ ಸರ್ಕಾರ ಸೂಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲ್ಕತ್ತದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರೊನಾ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದೆ. ಈಗಾಗಲೇ ಗುಜರಾತ್​ಗೆ ಶೇ 60 ರಷ್ಟು ಲಸಿಕೆ ಪೂರೈಸಿದೆ. ಆದರೆ ಉಳಿದ ರಾಜ್ಯಗಳಲ್ಲಿ ಇದರ ಪ್ರಮಾಣ ಕೇವಲ ಶೇ 15 ರಿಂದ 20 ರಷ್ಟಿದೆ ಎಂದು ಮಮತಾ ಆರೋಪಿಸಿದ್ದಾರೆ.

ಇದನ್ನೂ ಓದಿ:

ಇಡೀ ದೇಶಕ್ಕೆ ಲಸಿಕೆ ನೀಡಲು ಕೇಂದ್ರ ಸರ್ಕಾರಕ್ಕೆ ಸುಮಾರು 20 ಸಾವಿರ ಕೋಟಿ ರೂ ಹಣ ಬೇಕು. ಇದನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಬಳಸಬಹುದು. ಅದರಲ್ಲಿ ಸಂಗ್ರಹವಾಗಿರುವ ಹಣವನ್ನು ಇವರು ಏನು ಮಾಡುತ್ತಾರೆ. ಹೊಸ ಸಂಸತ್ ಭವನ ನಿರ್ಮಾಣ ಈಗೇಕೆ ಎಂದು ಮಮತಾ ಪ್ರಶ್ನಿಸಿದ್ದಾರೆ. ಇನ್ನೊಂದೆಡೆ ಪ್ರಧಾನಿ ಇಂದು ಕರೆದಿದ್ದ ಮುಖ್ಯಮಂತ್ರಿಗಳ ಸಭೆಗೆ ಮಮತಾ ಬ್ಯಾನರ್ಜಿ ಗೈರಾಗಿದ್ದರು. ಇದು ಸತತ ಮೂರನೇ ಬಾರಿ ಅವರು ಪ್ರಧಾನಿ ಸಭೆಗೆ ಗೈರಾಗುತ್ತಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net