

ದೇಶದಲ್ಲಿ ಕರೊನಾ ವೈರಸ್ ಪ್ರಸರಣ ಮಿತಿಮೀರುತ್ತಿದೆ. ಅನೇಕ ಕಡೆಗಳಲ್ಲಿ ಸಮುದಾಯ ಪ್ರಸರಣವಾಗುತ್ತಿದ್ದರೂ ಅದನ್ನು ಜನಪ್ರತಿನಿಧಿಗಳು, ಸರ್ಕಾರಗಳು ಅಧಿಕೃತವಾಗಿ ಹೇಳುತ್ತಿಲ್ಲ.
ಹೀಗಿರುವಾಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮ ರಾಜ್ಯದಲ್ಲಿ ಕರೊನಾ ಸೋಂಕು ಸಮುದಾಯ ಪ್ರಸರಣ ಹಂತಕ್ಕೆ ತಲುಪಿದೆ ಎಂದು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಕೆ.ಕಲ್ಯಾಣ್ರ ಮನೆ ಹಾಳು ಮಾಡಿದ ಮನೆಕೆಲಸದವಳು; ಗಂಗಾ, ಶಿವಾನಂದ್ ಹಿಸ್ಟರಿಯೇ ಭಯಾನಕ
ಹತ್ರಾಸ್ ಗ್ಯಾಂಗ್ ರೇಪ್ ಖಂಡಿಸಿ ಕೋಲ್ಕತ್ತದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ನಂತರ ಮಾತನಾಡಿದ ದೀದಿ, ನಾವು ಕರೊನಾ ಸಾಂಕ್ರಾಮಿಕದ ಮಧ್ಯದಲ್ಲಿದ್ದೇವೆ. ನಮ್ಮ ಮೂವರು ಶಾಸಕರನ್ನು ಈಗಾಗಲೇ ಕಳೆದುಕೊಂಡಿದ್ದೇವೆ. ದೇಶಾದ್ಯಂತ ನಿಜಕ್ಕೂ ಕರೊನಾದಿಂದ ಎಷ್ಟು ಜನರು ಮೃತಪಟ್ಟಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಅದಾಗಲೇ ಕಮ್ಯೂನಿಟಿ ಸ್ಪ್ರೆಡ್ (ಸಮುದಾಯ ಪ್ರಸರಣ) ಶುರುವಾಗಿದೆ ಎಂದು ಹೇಳಿದ್ದಾರೆ.
ಕರೊನಾ ಕಾರಣದಿಂದ ಕಳೆದ ಕೆಲವು ದಿನಗಳಿಂದಲೂ ನಾವು ಯಾವುದೇ ರ್ಯಾಲಿಯನ್ನು ನಡೆಸುತ್ತಿಲ್ಲ. ಆದರೆ ಬಿಜೆಪಿ ಅದನ್ನು ಮಾಡುತ್ತಿದೆ. ಅಷ್ಟೇ ಅಲ್ಲ ದ್ವೇಷ ಮತ್ತು ಕರೊನಾ ಸೋಂಕನ್ನು ಹಬ್ಬಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇನ್ನು ಕೋಲ್ಕತ್ತದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲೂ ಸಹ ತೃಣಮೂಲ ಕಾಂಗ್ರೆಸ್ನ ಹಲವು ಕಾರ್ಯಕರ್ತರು ಮಾಸ್ಕ್ ಇಲ್ಲದೆ ಪಾಲ್ಗೊಂಡಿದ್ದರು.(ಏಜೆನ್ಸೀಸ್)