ಭ್ರಷ್ಟಾಚಾರದಲ್ಲಿ ಮಾಲೂರು ಮೊದಲು!

ex mla manjunath gowda
ಮಾಲೂರಿನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಎಸ್​.ಮಂಜುನಾಥ್​ ಗೌಡ ಮಾತನಾಡಿದರು.
Published on

ಕೋಲಾರ/ಮಾಲೂರು: ಇಡೀ ದೇಶದಲ್ಲಿ ಹೆಚ್ಚು ಭ್ರಷ್ಟಾಚಾರ ರಾಜ್ಯದಲ್ಲಿ ತಾಂಡವಾಡುತ್ತಿದ್ದು, ಅದರಲ್ಲಿ ಮಾಲೂರು ಮೊದಲ ಸ್ಥಾನದಲ್ಲಿದೆ. ಇದಕ್ಕೆಲ್ಲ ಶಾಸಕ ಕೆ.ವೈ.ನಂಜೇಗೌಡ ಕಾರಣ ಎಂದು ಮಾಜಿ ಶಾಸಕ ಕೆ.ಎಸ್​.ಮಂಜುನಾಥ್​ ಗೌಡ ನೇರ ಆರೋಪ ಮಾಡಿದರು.

ಮಾಲೂರು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಂಜೇಗೌಡರು ಜನರ ಕಷ್ಟಗಳಿಗೆ ಸ್ಪಂದಿಸಲು ಶಾಸಕನಾಗಿ ಬಂದಿಲ್ಲ. ಕೆರೆ, ಜಮೀನುಗಳನ್ನು ನುಂಗಲು ಬಂದಿರೊದು ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಕಳೆದ ಏಳು ವರ್ಷಗಳಿಂದ ದ್ವೇಷ ರಾಜಕಾರಣ ಮಾಡುವುದು ಬೇಡ ಎಂದು ಸುಮ್ಮನಿದ್ದೆ, ಆದರೂ ಸಹ ನನ್ನ ವಿರುದ್ಧ ಏಕವಚನದಲ್ಲಿ ಮಾತನಾಡಿ ಸಣ್ಣತನ ತೋರಿಸಿಕೊಂಡಿದ್ದಾರೆ. ಸುಮ್ಮನಿದ್ದವರನ್ನು ಕೆಣಕಿ ತಪು$್ಪ ಮಾಡಿದ್ದಾರೆ. "ನನಗೆ ಹುಚ್ಚು ಹಿಡಿದಿಲ್ಲ, ನಿನಗೆ ಹುಚ್ಚು ಹಿಡಿದಿರೋದು' ಎಂದು ಏಕವಚನದಲ್ಲಿ ತಿರುಗೇಟು ನೀಡಿದರು.

ಪ್ರತಿ ಕಚೇರಿಯಲ್ಲೂ ಹಣ ವಸೂಲಿ ಜೋರಾಗಿ ನಡೆಯುತ್ತಿದೆ. ಪ್ರಶ್ನೆ ಮಾಡಿದವರ ಮೇಲೆ ಸುಳ್ಳು ಕೇಸು ದಾಖಲು ಮಾಡಿಸಲಾಗುತ್ತಿದೆ. ಪೊಲೀಸ್​ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ವ್ಯಾಪಕವಾಗಿದ್ದು, ಈ ಬಗ್ಗೆ ಎಸ್ಪಿ, ಐಜಿಗೂ ದೂರು ನೀಡಲಾಗುವುದು ಎಂದರು.

ನನ್ನನ್ನು ಮಾಲೂರಿಗೆ ಕರೆ ತಂದಿದ್ದು ನಂಜೇಗೌಡ ಅಲ್ಲ, ಕ್ಷೇತ್ರದ ಜನ, ನನ್ನ ಬಳಿಗೆ ಹೇಗೆ ಬಂದ ಎಂಬುದಕ್ಕೆ ಹಿರಿಯರು ಸಾಯಿದ್ದಾರೆ. ಪಟಾಕಿ, ಹೂವಿನ ಹಾರಕ್ಕಾಗಿ ಹಣ ಕೇಳಿ ಪಡೆದುಕೊಂಡಿದ್ದಾನೆ. ಆಗಲೂ ಡಬಲ್​ ಗೇಮ್​ ರಾಜಕೀಯ ಮಾಡಿದ್ದಾರೆ ಎಂದು ಕಿಡಿಕಾರಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಟಿ.ಬಿಕೃಷ್ಣಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಪದ್ಮಾವತಿ, ಜಿಲ್ಲಾ ಮಹಿಳಾ ಬಿಜೆಪಿ ಅಧ್ಯೆ ಅರುಣಮ್ಮ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುಸ್ಕೂರು ಬಾಬು, ಸಂಚಾಲಕ ಅಧಿಕಾರ ಹಟ್ಟಿ ಬಾಬು, ಪುರಸಭಾ ಸದಸ್ಯ ವೇಮನ, ಮುಖಂಡರಾದ ಎಸ್​ ಕೃಷ್ಣಾರೆಡ್ಡಿ, ಓಜೋರಹಳ್ಳಿ ಮುನಿಯಪ್ಪ, ತೇಜಸ್​ ಗೌಡ, ಚಿನ್ನಸ್ವಾಮಿಗೌಡ, ರಾಮಚಂದ್ರ, ಚಲಪತಿ, ವೆಂಕಟೇಶ್​, ಸೋಮಣ್ಣ, ಕೆ.ಆರ್​.ನಾರಾಯಣಸ್ವಾಮಿ, ರಾಜಪ್ಪ, ಅಪ್ಪಿರಾಜು ಹಾಜರಿದ್ದರು.

* ಕೋರ್ಟ್​ ಆದೇಶದಿಂದ ಮತಿಭ್ರಮಣೆ!

ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದಾಗ ಬ್ಯಾಲೇಟ್​ ಪೇಪರನ್ನು ದೋಖಾ ಮಾಡಿದ್ದಾರೆ. ಈಗಲೂ ಅದೇ ರೀತಿನೇ ಗೆದ್ದಿರೊದು, ಮರು ಎಣಿಕೆ ಆದೇಶದ ಬಗ್ಗೆ, ರೀಕೌಂಟಿಂಗ್​ ಆದೇಶ ಮಾಡಿದ್ದಕ್ಕೆ ಬಾಯಿಗೆ ಬಂದಂತೆ ಮಾತನಾಡಲು ಶುರು ಮಾಡಿದ್ದಾರೆ. ಇದರಿಂದ ನಂಜೇಗೌಡ ಎಷ್ಟರ ಮಟ್ಟಿಗೆ ತಲೆಕೆಡಿಸಿಕೊಂಡಿದ್ದಾರೆ ಎಂಬುದು ಗೋಚರವಾಗುತ್ತಿದೆ ಎಂದು ವ್ಯಂಗ್ಯವಾಡಿದರು.

* ನೇಪಾಳದಂತೆ ದಂಗೆಯೇಳಲು ಕರೆ

ಸುದ್ದಿಗೋಷ್ಠಿ ನಂತರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಂಜುನಾಥ್​ ಗೌಡ, ಪುಷ್ಪ ಚಿತ್ರದ ಡೈಲಾಗ್​ ಉದಾಹರಿಸಿದ್ದಾರೆ. ಇನ್ಮುಂದೆ ಶಾಸಕ ಕೆ.ವೈ. ನಂಜೇಗೌಡರಿಗೆ ನಿದ್ದೆ ಬರದಂತೆ ಮಾಡಿ. ನೇಪಾಳದಂತೆ ಜನರು ದಂಗೆ ಎದ್ದು ಪಾಠ ಕಲಿಸಬೇಕು. ಈ ವಿಚಾರದಲ್ಲಿ ತಗ್ಗುವುದೇ ಇಲ್ಲ ಎಂದು ಕುಟುಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net