

ಮುಂಬೈ: ಹಳದಿ ಬಿಕನಿ ತೊಟ್ಟು ಪಾರ್ಕೊಂದರಲ್ಲಿ ಕಲ್ಲುಹಾಸಿನ ಮೇಲೆ ಆಸೀನಳಾಗಿರುವ ಮಲ್ಲಿಕಾ ಶೆರಾವತ್ ಕ್ಯಾಮೆರಾಗೆ ಫೋಸ್ ನೀಡಿದ್ದಾಳೆ. ಪಡ್ಡೆಗಳ ಮನಸೂರೆಗೊಳ್ಳುವ ವಿವಿಧ ಭಂಗಿಗಳ ಫೋಟೋಗಳನ್ನು ನಟಿ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾಳೆ. ಇವು ವೈರಲ್ ಆಗಿವೆ.
'ಬೇಸಿಗೆಯಲ್ಲಿ ಬಿಕಿನಿಯನ್ನು ಧರಿಸಲು ನನ್ನ ದೇಹವು ಸಿದ್ಧವಾಗಿದೆ.. ನಿರಾಸಕ್ತಿಯಿಂದ ದೂರವಾಗಿ ಆತ್ಮವಿಶ್ವಾಸದಿಂದ ಪ್ರಜ್ವಲಿಸುವುದಾಗಿದೆ' ಎಂದು ತನ್ನ ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾಳೆ. ಈಗ ಯಾವ ಬೇಸಿಗೆ? ಯಾವ ಬಿಸಿಲು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಮಲ್ಲಿಕಾ ಆಗಾಗ್ಗೆ ಜಿಮ್ನಲ್ಲಿ ಕಸರತ್ತು ಮಾಡುವ ವೀಡಿಯೊಗಳು ಮತ್ತು ಚಿತ್ರಗಳನ್ನು ಹಂಚಿಕೊಳ್ಳುತ್ತಾಳೆ. ಇತ್ತೀಚೆಗೆ ತನ್ನ ವ್ಯಾಯಾಮದ ದಿನಚರಿಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಳು.
ರಜತ್ ಕಪೂರ್ ಅವರ ಆರ್ಕೆ/ಆಕೆ ನಲ್ಲಿ ಮಲ್ಲಿಕಾ ಕೊನೆಯದಾಗಿ ನಟಿಸಿದ್ದರು.