

ಯಳಂದೂರು: ತಾಲೂಕಿನ ಗೌಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ. ಮಲ್ಲೇಶ್(ಪಂಜು) ಉಪಾಧ್ಯಕ್ಷರಾಗಿ ಸುಂದ್ರಮ್ಮ ಅವಿರೋಧವಾಗಿ ಆಯ್ಕೆಯಾದರು.
ಶನಿವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. 12 ನಿರ್ದೇಶಕರಿರುವ ಈ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರು.
ಮಪತ್ರ ಪರಿಶೀಲಿಸಿದ ಚುನಾವಣಾಧಿಕಾರಿ ಸುಭಾಷಿಣಿ ಇವರಿಬ್ಬರ ನಾಮಪತ್ರ ಸಿಂಧುವಾಗಿದ್ದು. ಅಧ್ಯಕ್ಷ ಸ್ಥಾನಕ್ಕೆ ಎಂ.ಮಲ್ಲೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸುಂದ್ರಮ್ಮ ಮಾತ್ರ ನಾಮಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಇವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೆದಷಣೆ ಮಾಡಿದರು.
ಈ ಸಂದರ್ಭದಲ್ಲಿ ನೂನತ ಅಧ್ಯಕ್ಷ ಎಂ. ಮಲ್ಲೇಶ್ ಮಾತನಾಡಿ, ಈ ಸಹಕಾರ ಸಂಘವು 1976 ರಲ್ಲಿ ಸ್ಥಾಪನೆಯಾಗಿದ್ದು ಇದಕ್ಕೆ ತನ್ನದೇ ಆದ ಮಹತ್ವ ಇದೆ. ಮುಂದಿನ ವರ್ಷಕ್ಕೆ 50 ವರ್ಷಗಳನ್ನು ಪೂರೈಸಲಿರುವ ಸಂಘದ ಅಧ್ಯಕ್ಷನಾಗಿ ನಾನು ಆಯ್ಕೆಯಾಗಿರುವುದು ಅತೀವ ಸಂತಸ ತಂದಿದೆ. ನಮ್ಮ ಸಂಘದ ವ್ಯಾಪ್ತಿಗೆ ಗೌಡಹಳ್ಳಿ, ಮಲಾರಪಾಳ್ಯ, ವಡಗೆರೆ, ಚಾಮಲಾಪುರ, ಕೊಮಾರನಪುರ, ಗಣಿಗನೂರು, ಉಪ್ಪಿನಮೋಳೆ, ಆಮೆಕೆರೆ ಗ್ರಾಮಗಳು ಸೇರುತ್ತವೆ. ನೂರಾರು ಸದಸ್ಯರಿರುವ ಈ ಸಂಘದ ಸರ್ವತೋಮುಖ ಅಭಿವೃದ್ಧಿಗೆ ನಾನು ಪ್ರಾಮಾಣಿಕವಾಗಿ ದುಡಿಯಲು ಪ್ರಯತ್ನಿಸುತ್ತೇನೆ. ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಸದಸ್ಯರಿಗೆ ತಲುಪಿಸಲು, ರಸಗೊಬ್ಬರ ಸೇರಿದಂತೆ ಇತರ ಸವಲತ್ತುಗಳನ್ನು ತಲುಪಿಸಲು ನಾನು ಶಕ್ತಿಮೀರಿ ಪ್ರಯತ್ನ ಮಾಡುತ್ತೇನೆ. ನನ್ನ ಗೆಲುವಿಗೆ ದುಡಿದ ಎಲ್ಲ ಸದಸ್ಯರಿಗೂ ಹಾಗೂ ಅವಿರೋಧವಾಗಿ ಆಯ್ಕೆಯಾಗಲು ಕಾರಣವಾಗಿರುವ ಎಲ್ಲ ನಿರ್ದೆಶಕರಿಗೂ, ಮುಖಂಡರಿಗೂ, ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಹಾರ-ತುರಾಯಿಗಳನ್ನು ಹಾಕಿ, ಸಿಹಿ ತಿನ್ನಿಸಿ ಅವರ ಅಭಿಮಾನಿಗಳು ಸಂಭ್ರಮಿಸಿದರು. ನಿರ್ದೇಶಕರಾದ ಜಿ.ಪಿ.ಸೋಮಶೇಖರ್, ಜಿ.ಶಂಭುಲಿಂಗಪ್ಪ, ನಟರಾಜು, ಎನ್.ಮಹದೇವಸ್ವಾಮಿ, ಎಂ.ಜಯಪಾಲ, ಬಿ.ನೀಲಮ್ಮ, ಆರ್.ರಾಜೇಶ್, ರಾಜಣ್ಣನಾಯಕ, ಎಂ.ಸಿದ್ದರಾಜು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಗೌಡಹಳ್ಳಿ ರವಿ, ಮುಖಂಡರಾದ ಚಂದ್ರಶೇಖರ್, ರಾಚಪ್ಪ, ಶಿವರುದ್ರಪ್ಪ, ನಾಗೇಂದ್ರ, ಪುಟ್ಟಯ್ಯ ಕಾರ್ಯನಿರ್ವಾಹಕ ಅಧಿಕಾರಿ ರಂಗಸ್ವಾಮಿ, ಅನಿಲ್‌ಕುಮಾರ್, ಲೆಕ್ಕಿಗ ಮಾದೇಶ್, ಶಶಿಕಿರಣ್, ಪ್ರಮೋದ್ ಸೇರಿದಂತೆ ಅನೇಕರು ಇದ್ದರು.