ಮಹದೇಶ್ವರಸ್ವಾಮಿ ಹುಲಿವಾಹನೋತ್ಸವ

23hun-3
Published on

ಹುಣಸೂರು: ಮಹಾಶಿವರಾತ್ರಿ ಅಂಗವಾಗಿ ಚಿಕ್ಕಹುಣಸೂರು ಗದ್ದೆ ಬಯಲಿನಲ್ಲಿರುವ ಶ್ರೀ ಮಲೆ ಮಹದೇಶ್ವರಸ್ವಾಮಿಯ ಹುಲಿವಾಹನೋತ್ಸವ ನಡೆಯಿತು.
ದೇವಾಲಯದಲ್ಲಿ ಮಹದೇಶ್ವರಸ್ವಾಮಿಯ ಹರಿಕಥೆ ನಡೆಯಿತು. ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲಂಕೃತ ಬೆಳ್ಳಿ ರಥದಲ್ಲಿ ಸ್ವಾಮಿಯನ್ನು ಕೂರಿಸಿ ಮಂಗಳವಾದ್ಯ, ಗುಡ್ಡರ ಕಂಸಾಳೆಯೊಂದಿಗೆ ನಗರದ ದಾವಣಿ ಬೀದಿ, ಕಾಫಿವರ್ಕ್ಸ್ ರಸ್ತೆ, ಸೇತುವೆ, ಕಲ್ಕುಣಿಕೆ ವೃತ್ತ, ರಂಗನಾಥ ಬಡಾವಣೆವರೆಗೆ ಮೆರವಣಿಗೆ ನಡೆಸಲಾಯಿತು. ಮುಖಂಡರಾದ ದೇವರಾಜ್, ಶಿವಣ್ಣ ಹಾಜರಿದ್ದರು.

ಶನೈಶ್ಚರಸ್ವಾಮಿ ದೇಗುಲದ ವಾರ್ಷಿಕೋತ್ಸವ: ಹುಣಸೂರು ತಾಲೂಕಿನ ಚಿಲ್ಕುಂದದ ಶ್ರೀ ಶನೈಶ್ಚರಸ್ವಾಮಿ ದೇವಾಲಯದ 4ನೇ ವರ್ಷದ ವಾರ್ಷಿಕೋತ್ಸವ ಆಯೋಜಿಸಲಾಗಿತ್ತು.
ಬೆಳಗ್ಗೆಯಿಂದ ಸಂಜೆವರೆಗೂ ಪೂಜಾ ಕಾರ್ಯಗಳು ನಡೆಯಿತು. ರಾತ್ರಿ ಶನೈಶ್ಚರಸ್ವಾಮಿ ಹರಿಕಥೆ ನಡೆಯಿತು. ನೂರಾರು ಭಕ್ತರು ಈ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು. ಗ್ರಾಮದ ಯಜಮಾನರಾದ ರಾಜಶೆಟ್ಟಿ, ಅಣ್ಣಯ್ಯಶೆಟ್ಟಿ, ಚಂದ್ರನಾಯಕ ಹಾಗೂ ಮುಖಂಡರಾದ ಜಯರಾಮ್, ಹನುಮಂತ, ರಾಜಣ್ಣ, ಮಹದೇವ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net