ತುಂಬಸೋಗೆ ಗ್ರಾಮದಲ್ಲಿ ಗಂಡು ಚಿರತೆ ಸೆರೆ

Published on

 ಎಚ್.ಡಿ.ಕೋಟೆ : ಸಾಕು ಪ್ರಾಣಿಗಳನ್ನು ಬಲಿ ಪಡೆದು ಉಪಟಳ ನೀಡುತ್ತಿದ್ದ ಚಿರತೆ ಗುರುವಾರ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಬಿದ್ದಿದೆ.

ತುಂಬಸೋಗೆ ಸಮೀಪದ ಸುತ್ತಮುತ್ತಲ ಗ್ರಾಮಗಳಲ್ಲಿ ಹುಲಿ, ಚಿರತೆ ಕಾಣಿಸಿಕೊಳ್ಳುತ್ತಿದ್ದು, ಕೂಡಲೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳು ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಆಗ್ರಹಿಸಿದ್ದರು. ನಂತರ ಅರಣ್ಯ ಇಲಾಖೆಯವರು ಗ್ರಾಮದ ಗವಿನಾಯಕ ಅವರ ಜಮೀನಿನಲ್ಲಿ ಬೋನು ಇರಿಸಿದ್ದರು. ಗುರುವಾರ ರಾತ್ರಿ ಬೋನಿಗೆ 5 ವರ್ಷದ ಗಂಡು ಚಿರತೆ ಸೆರೆಯಾಗಿದೆ.

ಸ್ಥಳಕ್ಕಾಗಮಿಸಿದ ಸಿಬ್ಬಂದಿ ನಾರಾಯಣ್, ಪರಮೇಶ್, ದೀಪು, ಧನುಷ್, ಅಂಕಪ್ಪ, ಸುರೇಂದ್ರ, ಮಹೇಶ್ ಚಿರತೆ ರಕ್ಷಿಸಿ ವೈದ್ಯಕೀಯ ಪರೀಕ್ಷೆ ನಡೆಸಿ ಬಂಡೀಪುರ ಅರಣ್ಯಕ್ಕೆ ಸ್ಥಳಾಂತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net