

ತಿರುವನಂತಪುರಂ: ಮಲಯಾಳಂ ಚಿತರಂಗದ ಖ್ಯಾತ ನಟ ನಿರ್ಮಲ್ ಬೆನ್ನಿ ಅವರು ಹೃದಯಾಘಾತದಿಂದಾಗಿ ಇಹಲೋಕ ತ್ಯಜಿಸಿದ್ದಾರೆ. ಮೃತರಿಗೆ 37 ವರ್ಷ ವಯಸ್ಸಾಗಿತ್ತು.
ನಿರ್ಮಲ್ ಅವರ ಸಾವಿನ ಸುದ್ದಿಯನ್ನು ಅವರ ಆಪ್ತ ಸ್ನೇಹಿತ, ನಿರ್ಮಾಪಕ ಸಂಜಯ್ ಪಡಿಯೂರ್ ಖಚಿತಪಡಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂದಹಾಗೆ, 2012ರಲ್ಲಿ ನಿರ್ಮಲ್ ಚಿತ್ರರಂಗಕ್ಕೆ ಕಾಲಿಟ್ಟರು. ನವಗತರ್ಕ್ ಸ್ವಾಗತಂ, ಅಮೆನ್ ಚಿತ್ರದಲ್ಲಿನ ಕೊಚ್ಚನ ಹೆಸರಿನ ಪಾತ್ರ ಮಾಡಿ ಗಮನ ಸೆಳೆದಿದ್ದರು. ಚಿತ್ರಗಳಲ್ಲಿ ಮಾತ್ರವಲ್ಲದೇ ಜನಪ್ರಿಯ ಯೂಟ್ಯೂಬ್ ವೀಡಿಯೋಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ನಿರ್ಮಲ್ ಅವರು ಹೆಚ್ಚು ಖ್ಯಾತಿ ಪಡೆದಿದ್ದರು. ಅವರ ನಿಧನಕ್ಕೆ ಮಾಲಿವುಡ್ ಸಂತಾಪ ಸೂಚಿಸಿದ್ದು, ಖ್ಯಾತ ನಟ, ನಟಿಯರು ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.