

Bollywood: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ದೇಹವನ್ನು ಫಿಟ್ ಮಾಡಿಕೊಳ್ಳುವ ಉದ್ದೇಶದಿಂದ ಅನೇಕ ರೀತಿಯ ಪಾನೀಯಗಳು, ಔಷಧಿಗಳು , ಪ್ರೊಟೀನ್ಯುಕ್ತ ಆಹಾರ ಪದಾರ್ಥಗಳ ಮೊರೆ ಹೋಗುತ್ತಾರೆ. ಅದೇ ರೀತಿಯಲ್ಲಿ ಮಾರುಕಟ್ಟೆಯಲ್ಲಿ ದುಬಾರಿ ಟೀಗಳು, ಆರೋಗ್ಯ ಪಾನೀಯಗಳು ಲಭ್ಯವಿರುತ್ತವೆ. ಈ ರೀತಿಯ ಪಾನೀಯ ಸೇವನೆ ಮಾಡಿದರೂ ಕೂಡ ಕೆಲವೊಮ್ಮೆ ದೇಹವನ್ನು ಫಿಟ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಅಡುಗೆ ಮನೆಯಲ್ಲಿಯೇ ಸಿಗುವಂತಹ ಪದಾರ್ಥಗಳನ್ನು ಬಳಸಿ ಇವು ನಿಮ್ಮ ದೇಹವನ್ನು ಫಿಟ್ ಮಾಡಲು ಸಹಾಯ ಮಾಡುತ್ತದೆ.
ಅಂದಹಾಗೆ ಫಿಟ್ನೆಸ್ಗೆ ಹೆಸರುವಾಸಿಯಾದ ನಟಿ ಮಲೈಕಾ ಆರೋರ ತಮ್ಮ 51 ರ ವಯಸ್ಸಿನಲ್ಲೂ ತಮ್ಮ ದೇಹ ಫಿಟ್ ಆಗಿರುವುದರ ಬಗ್ಗೆ ಸೀಕ್ರೆಟ್ವೊಂದನ್ನು ಬಹಿರಂಗ ಪಡಿಸಿದ್ದಾರೆ. ರಾತ್ರಿಯಿಡೀ ಜೀರಿಗೆಯನ್ನು ನೆನಸಿಟ್ಟು ಬೆಳಿಗ್ಗೆ ಆ ನೀರನ್ನು ಕುಡಿಯುವುದು. ಹಾಗೆಯೇ ಜೋಳವನ್ನು ರಾತ್ರಿಯಿಡೀ ನೀರಿನಲ್ಲಿ ನೆನಸಿ ಬೆಳಿಗ್ಗೆ ಕುಡಿಯುತ್ತೇನೆ ಎಂದು ತಿಳಿಸಿದ್ದಾರೆ. ಈ ಪಾನೀಯದ ಬಗ್ಗೆ ಆರೋಗ್ಯ ತಜ್ಞರೊಬ್ಬರು ಈ ಪಾನೀಯಗಳ ಪ್ರಯೋಜನವನ್ನು ವಿವರಿಸಿದ್ದಾರೆ.
ಜೀರಿಗೆ ಮತ್ತು ಜೋಳ ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿಯಾದ ಪದಾರ್ಥವಾಗಿದೆ. ಅದಕ್ಕಾಗಿ ಇದನ್ನು ಅಡುಗೆಮನೆಯ ವೈದ್ಯರು ಎಂದು ಕರೆಯಲಾಗುತ್ತದೆ. ಜೀರಿಗೆಯಲ್ಲಿರುವ ಥೈಮೋಲ್ ಕಿಣ್ವವು ಆಮ್ಲವನ್ನು ಉತ್ಪಾದಿಸುವ ಮೂಲಕ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಹಾಗೆಯೇ ಜೋಳವು ಹೊಟ್ಟೆ ಉಬ್ಬುವುದನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಇದರ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಸಿದ್ದಾರೆ.
ಜೀರಿಗೆ ನೀರನ್ನು ಪ್ರತಿದಿನ ಕುಡಿಯುವುದರಿಂದ ದೇಹದಲ್ಲಿ ಉತ್ಪತ್ತಿಯಾದ ಕೊಬ್ಬನ್ನು ಕರಗಿಸಲು ಸಹಾಯವಾಗುತ್ತದೆ. ಹಾಗೆಯೇ ದೇಹದ ಚಯಾಪಚಯ ಕ್ರಿಯೆ ನಡೆಸುತ್ತದೆ. ಈ ರೀತಿಯ ವಿಧಾನದಿಂದ ವೇಗವಾಗಿ ತೂಕ ಇಳಿಸಿಕೊಳ್ಳಬಹುದು.
ಜೀರಿಗೆ ಮತ್ತು ಮೆಂತ್ಯೆ ಬೀಜಗಳು ದೇಹದಿಂದ ವಿಷಕಾರಿ ಅನಿಲವನ್ನು ಹೊರಹಾಕಲು ಸಹಾಯ ಮಾಡುತ್ತದೆ. ವೈದ್ಯರ ಪ್ರಕಾರ ನೀರಿಗೆ ಸ್ವಲ್ಪ ನೀರನ್ನು ಬೆರೆಸಿ ಕುಡಿಯುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಿ, ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ.
ಜೋಳದ ನೀರು ಮತ್ತು ಜೀರಿಗೆ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಇದು ಇನ್ಸುಲಿನ್ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಇನ್ನು ದಿನವಿಡೀ ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ.
ಈ ಎರಡೂ ಪಾನೀಯಗಳನ್ನು ಸೇವಿಸುವುದರಿಂದ ಇದು ದೇಹ ಹಾಗೂ ಮನಸ್ಸನ್ನು ವಿಶ್ರಾಂತಿಗೊಳಿಸುತ್ತದೆ. ಹಾಗೇ ಮನಸ್ಥಿತಿಯನ್ನು ಸುಧಾರಿಸಿ ಒತ್ತಡವನ್ನು ಕಡಿಮೆ ಮಾಡುತ್ತದೆ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ