

ಮುಂಬೈ: ಬಾಲಿವುಡ್‌ನ ಜನಪ್ರಿಯ ನಟಿ ಮಲೈಕಾ ಅರೋರಾ ( malaika arora) ತಮ್ಮ ಫಿಟ್‌ನೆಸ್ ಮತ್ತು ನೃತ್ಯದಿಂದ ಸುದ್ದಿಯಲ್ಲಿದ್ದಾರೆ. ಹಲವು ಸಿನಿಮಾಗಳಲ್ಲಿ ಐಟಂ ಹಾಡುಗಳನ್ನು ಮಾಡಿರುವ ಮಲೈಕಾ ಅರೋರಾ, ಹಲವು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಈಗ ಅವರು ಕಾರ್ಯಕ್ರವೊಂದರಲ್ಲಿ ಒಬ್ಬ ಸ್ಪರ್ಧಿ ಮೇಲೆ ಮಲೈಕಾ ಕೋಪಗೊಂಡಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತುದೆ.
ಮಲೈಕಾ ಅರೋರಾ 'ಹಿಪ್ ಹಾಪ್ ಇಂಡಿಯಾ' ಟಿವಿ ಕಾರ್ಯಕ್ರಮದ ಎರಡನೇ ಸೀಸನ್‌ನಲ್ಲಿ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಸಮಯದಲ್ಲಿ, ಮಲೈಕಾ ಅರೋರಾ 16 ವರ್ಷದ ಸ್ಪರ್ಧಿಯ ವರ್ತನೆಯಿಂದ ಕೋಪಗೊಂದು ಮಲೈಕಾ ಎಲ್ಲರ ಮುಂದೆ ಅವನನ್ನು ಗದರಿಸಿದ್ದಾರೆ.
'ಹಿಪ್ ಹಾಪ್ ಇಂಡಿಯಾ'ದ ಎರಡನೇ ಸೀಸನ್‌ನ ಪ್ರೋಮೋ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಮಾಡುತ್ತಿದೆ. ಇದರಲ್ಲಿ, ಮಲೈಕಾ ಒಬ್ಬ ಹುಡುಗನಿಗೆ ನಿನ್ನ ತಾಯಿಯ ಫೋನ್ ಸಂಖ್ಯೆಯನ್ನು ಹೇಳುತ್ತಿರುವುದು ಕಂಡುಬರುತ್ತದೆ. ಇದರ ಬಗ್ಗೆ ಸ್ಪರ್ಧಿ ಆಶ್ಚರ್ಯ ವ್ಯಕ್ತಪಡಿಸಿ ಏಕೆ ಎಂದು ಕೇಳಿದನು? ಆಗ ಮಲೈಕಾ, “ಅವನು 16 ವರ್ಷದ ಹುಡುಗ, ಅವನು ನೃತ್ಯ ಮಾಡುತ್ತಿದ್ದಾನೆ. ಅವನು ನನ್ನನ್ನೇ ನೇರವಾಗಿ ನೋಡುತ್ತಿದ್ದಾನೆ, ನನ್ನತ್ತ ಕಣ್ಣು ಮಿಟುಕಿಸುತ್ತಿದ್ದಾನೆ. ಪ್ಲೇನ್ ಕಿಸ್ ಮಾಡುತ್ತಿದ್ದಾನೆಂದು ಎಂದು ಹೇಳುತ್ತಾ ಅವನ ಮೇಳೆ ಕೋಪಗೊಂಡಿದ್ದಾರೆ.
ಇದಾದ ನಂತರ, ಇತರ ಸ್ಪರ್ಧಿಗಳು ಸಹ ಆ ಹುಡುಗನನ್ನು ಕೀಟಲೆ ಮಾಡುತ್ತಾರೆ ಮತ್ತು ಮಲೈಕಾ ಅವರ ಮಾತನ್ನು ಬೆಂಬಲಿಸುತ್ತಾರೆ. ನಾವು ಆ ಸಹೋದರನೊಂದಿಗೆ ಮಾತನಾಡುತ್ತಿದ್ದೆವು, ಅವನಿಗೆ ಕೇವಲ 16 ವರ್ಷ ಎಂದು ತಿಳಿದಿದೆಯೇ?” ಮತ್ತು ಅವನು ಏನು ಮಾಡುತ್ತಿದ್ದಾನೆ ಮತ್ತು ಯಾರ ಮುಂದೆ ಮಾಡುತ್ತಿದ್ದಾನೆ. ಅವನನ್ನು ಗದರಿಸುವುದು ಸಮರ್ಥನೀಯವಾಗಿತ್ತು ಎಂದು ಹೇಳುತ್ತಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನು ನೋಡಿದ ನೆಟ್ಟಿಗರು ಕೇವಲ ಹೈಪ್ ಸೃಷ್ಟಿಸಲು ಅತಿಯಾಗಿ ನಟಿಸುತ್ತಿದ್ದಾರೆ. ಇದೆಲ್ಲ ಸ್ಕ್ರೀಪ್ಟ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಮಲೈಕಾ ಮತ್ತು ರೆಮೋ ಡಿ'ಸೋಜಾ ಒಟ್ಟಿಗೆ ಹಿಪ್ ಹಾಪ್ ಇಂಡಿಯಾ ಸೀಸನ್ 2 ರ ತೀರ್ಪುಗಾರರಾಗಿದ್ದಾರೆ. ಇದು ಮಾರ್ಚ್ 14, 2025 ರಿಂದ Amazon MX Player ನಲ್ಲಿ ಪ್ರಾರಂಭವಾಗಿದೆ.