

ರಾಣೆಬೆನ್ನೂರ: ತಾಲೂಕಿನ ಹುಲಿಹಳ್ಳಿ ಗ್ರಾಮದಲ್ಲಿ ಸರ್ಕಾರದಿಂದ ಪರಿಶಿಷ್ಟ ಜಾತಿ ಜನರಿಗೆ ಮಂಜೂರು ಮಾಡಿದ ಜಮೀನುಗಳಿಗೆ ತೆರಳುವ ದಾರಿಯಲ್ಲಿ ಓಡಾಡಲು ಅಡ್ಡಪಡಿಸಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರ ನೇತೃತ್ವದಲ್ಲಿ ಗ್ರಾಮಸ್ಥರು ಸೋಮವಾರ ಗ್ರೇಡ್&-2 ತಹಸೀಲ್ದಾರ್ ಅರುಣ ಕಾರಗಿ ಅವರಿಗೆ ಮನವಿ ಸಲ್ಲಿಸಿದರು.
ರೈತರು ತಮ್ಮ ಜಮೀನುಗಳಿಗೆ ಹೋಗುವ ಮತ್ತು ದನ ಕುರಿಗಳನ್ನು ಮೇಯಿಸಲು ಹುಲ್ಲುಗಾವಲು ಪ್ರದೇಶ ಇಲ್ಲದಿರುವುದರಿಂದ ಗ್ರಾಮದ ರಿ.ಸ.ನಂ 255, 259, 249, 246ಗಳಲ್ಲಿನ ಜಾಗೆ ಮೂಲಕ ತಲತಲಾಂತರಗಳಿಂದ ಸಂಚರಿಸುತ್ತಾ ಬಂದಿದ್ದಾರೆ. ಆದರೆ ಈಗ ಈ ದಾರಿಯಲ್ಲಿ ಮುಳ್ಳಗಂಟಿಗಳನ್ನು ಹಾಕಿ ಬಂದ್ ಮಾಡಲಾಗಿದೆ. ಇದರಿಂದ ರೈತರು ಸಾಗುವಳಿಗೆ ತಮ್ಮ ಜಮೀನುಗಳಿಗೆ ಹೋಗಿ ಬರಲು ತೊಂದರೆಯಾಗಿದೆ. ಆದ್ದರಿಂದ ಆದಷ್ಟು ಕಂದಾಯ ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ರೈತರಾದ ಹನುಮಂತಪ್ಪ ಕಬ್ಬಾರ, ರಾಜೇಶ ಅಂಗಡಿ, ಮಂಜುನಾಥ ಗುಡ್ಡಣ್ಣನವರ, ಬಸನಗೌಡ ಕೊಪ್ಪದ, ಶೋಭಾ ಬೆಳವಿಗಿ, ದಿಳ್ಳೆಪ್ಪ ಹುಚ್ಚಣ್ಣನವರ, ಲಕ್ಷಿ$್ಮ ಬಾಸೂರ, ಲಕ್ಷ$್ಮವ್ವ ಚಿನ್ನಣ್ಣನವರ, ಸಂತೋಷ ಚಿನ್ನಣ್ಣನವರ, ಬಸಮ್ಮ ಅಡಿನವರ, ಹನುಮಂತ ಚಮಟಿ, ಮಂಜನಗೌಡ ಪಾಟೀಲ, ಎನ್.ಬಿ. ಬಾಳನಗೌಡ್ರ, ನಿಂಗಪ್ಪ ಡೊಂಬರ ಮತ್ತಿತರರು ಉಪಸ್ಥಿತರಿದ್ದರು.