

ಭೋಪಾಲ್: ಅಂಗಡಿಗಳ ಮುಂದೆ ಮಾಲೀಕರ ಹೆಸರುಗಳನ್ನು ಪ್ರದರ್ಶಿಸುವುದನ್ನು ಕಡ್ಡಾಯ ಮಾಡಬೇಕು ಎಂದು ಮಧ್ಯಪ್ರದೇಶ ಬಿಜೆಪಿ ಶಾಸಕ ರಮೇಶ್ ಮೆಂದೋಲ್ ಅವರು ಶನಿವಾರ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಉತ್ತರ ಪ್ರದೇಶ ಸರ್ಕಾರವು ಕನ್ವರ್ ಯಾತ್ರೆಯ ಮಾರ್ಗದಲ್ಲಿರುವ ಹೋಟೆಲ್, ರೆಸ್ಟೋರೆಂಟ್ ಮತ್ತಿತರ ಆಹಾರ ಅಂಗಡಿಗಳ ಮುಂದೆ ಮಾಲೀಕರ ಹೆಸರುಗಳನ್ನು ಪ್ರದರ್ಶಿಸಬೇಕು ಎಂದು ಆದೇಶಿಸಿದ್ದು ವಿವಾದಾತ್ಮಾಕ ಸ್ವರೂಪ ಪಡೆದಿದೆ. ಈ ನಡುವಯೇ ಮೆಂದೋಲಾ ಅವರ ಈ ಮನವಿ ಮಾಡಿದ್ದಾರೆ.
ಯಾವುದೇ ವ್ಯಕ್ತಿಯ ಹೆಸರು, ಅವರ ಗುರುತು, ಅವರ ಹೆಸರಿನ ಬಗ್ಗೆ ಹೆಮ್ಮೆ ಇರಬೇಕು. ಅವರ ಹೆಸರನ್ನು ಕೇಳುವುದು ಗ್ರಾಹಕರ ಹಕ್ಕು. ರಾಜ್ಯದಲ್ಲಿ ಈ ಸಂಬಂಧ ಕಾನೂನು ಜಾರಿ ಮಾಡಲು ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ಇಂದೋರ್-2 ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹೇಳಿದ್ದಾರೆ.
ನಾಲ್ಕು ಬಾರಿ ಶಾಸಕರಾಗಿರುವ ಮೆಂಡೋಲಾ, ಮಧ್ಯಪ್ರದೇಶದ ಪ್ರತಿಯೊಬ್ಬ ಸಣ್ಣ ಮತ್ತು ದೊಡ್ಡ ವ್ಯಾಪಾರಿಗಳು, ಎಲ್ಲಾ ಉದ್ಯಮಿಗಳು ಮತ್ತು ಅಂಗಡಿಯವರು ತಮ್ಮ ಹೆಸರನ್ನು ಹೇಳುವಲ್ಲಿ ಈ ಹೆಮ್ಮೆಯ ಭಾವವನ್ನು ಅನುಭವಿಸಬಹುದು ಎಂದು ಹೇಳಿದ್ದಾರೆ.