ಸಮಾಜಮುಖಿ ಕೆಲಸಗಳ ಮೂಲಕ ಜೀವನ ಸಾರ್ಥಕಗೊಳಿಸಿಕೊಳ್ಳಿ

10kls1
ಕಳಸ ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಸಾವಿತ್ರಿ ಜಿ. ಜೋಷಿ ಅಧಿಕಾರ ಸ್ವೀಕರಿಸಿದರು. ಸಂಧ್ಯಾ ರಿತೇಶ್, ಜೆ.ಎಂ.ಶ್ರೀಹರ್ಷ, ಕಿರಣ್ ಶೆಟ್ಟಿ ಇತರರಿದ್ದರು.
Published on

ಕಳಸ: ಸಮಾಜಮುಖಿ ಕೆಲಸಗಳ ಮೂಲಕ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಹೇಳಿದರು.

ಕಳಸ ರೋಟರಿ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕಳಸ ರೋಟರಿ ಮತ್ತು ಇನ್ನರ್‌ವ್ಹೀಲ್ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭೂಮಿ ನಮಗೆ ಬದುಕಲು ಅವಕಾಶ ಮಾಡಿಕೊಟ್ಟಿದೆ. ಈ ದೇಶದ ಅಭಿವೃದ್ಧಿಗೆ ನಮ್ಮ ಕೊಡುಗೆ ನೀಡುವ ಮೂಲಕ ಭೂಮಿಯ ಋಣವನ್ನು ನಾವು ತೀರಿಸಬೇಕು ಎಂದು ಹೇಳಿದರು.
ಕಳಸ ರೋಟರಿ ಕ್ಲಬ್ ಅಧ್ಯಕ್ಷರಾಗಿ ಸಾವಿತ್ರಿ ಜಿ. ಜೋಷಿ ಮತ್ತು ಇನ್ನರ್‌ವ್ಹೀಲ್ ಅಧ್ಯಕ್ಷರಾಗಿ ಸಂಧ್ಯಾ ರಿತೇಶ್ ಅಧಿಕಾರ ಸ್ವೀಕರಿಸಿದರು. ಸಹಾಯಕ ಗವರ್ನರ್ ಜೆ.ಎಂ.ಶ್ರೀಹರ್ಷ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿದರು. ರೋಟರಿ ವಲಯ ಲೆಫ್ಟಿನೆಂಟ್ ಕಿರಣ್ ಶೆಟ್ಟಿ, ಡಿ.ಕೆ.ಪಣೀಶ್ (ಕಾರ್ಯದರ್ಶಿ), ಗಿರಿಜಾಶಂಕರ ಜೋಷಿ (ಖಜಾಂಚಿ) ಅಧಿಕಾರ ಸ್ವೀಕರಿಸಿದರು. ಕೆ.ಆರ್.ಪ್ರಭಾಕರ್, ಡಾ. ವಿಕ್ರಮ ಪ್ರಭು, ಡಾ. ಸಂತೋಷ್ ಪೂಜಾರಿ, ಕೆ.ಕೆ.ಬಾಲಕೃಷ್ಣ ಭಟ್, ರಾಜಲಕ್ಷ್ಮೀ ಜೋಷಿ, ಎಚ್.ಜಿ.ಮಹೇಂದ್ರ, ಸುಗಮ್, ರಾಜಗೋಪಾಲ ಜೋಷಿ, ಶಿವರಾಮ್ ರಾಗಿಹಳ್ಳಿ, ವಿಶಾಲ್ ನೋಟದ ಮತ್ತು ಎಚ್.ಎಸ್.ರಾಘವ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net