

Recipe: ಇಂದಿನ ದಿನಗಳಲ್ಲಿ ಸಂಜೆಯಾದ ತಕ್ಷಣ ಅನೇಕರು ರುಚಿಯಾದ ಆಹಾರಗಳನ್ನು ತಿನ್ನಲು ಬಯಸುತ್ತಾರೆ. ಹಾಗೆಯೇ ಬೋಂಡಾ, ಮಿರ್ಚಿ, ಪಿಜ್ಜಾ, ಬರ್ಗರ್ನಂತಹ ಆಹಾರಗಳನ್ನು ತಿಂದು ಬೇಜಾರಾಗಿದ್ದರೆ. ಈ ರೀತಿಯ ಗರಂಗರಂ ಗೋಧಿ ಚಿಪ್ಸ್ ರೆಸಿಪಿ ಮಾಡಿ ಸೇವಿಸಿ...
* 1 ಕಪ್ ಗೋಧಿ
* 1 ಚಮಚ ಪೆರಿಪೆರಿ ಮಸಾಲ
* ಕರಿಯಲು ಎಣ್ಣೆ
ಒಂದು ಬೌಲ್ಗೆ 1 ಕಪ್ ಗೋದಿ ಹಿಟ್ಟು ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನಂತರ ಹಿಟ್ಟನ್ನು ಚಿಕ್ಕ ಉಂಡೆ ಮಾಡಿಕೊಂಡು ಉದ್ದಿಕೊಳ್ಳಿ. ಬಳಿಕ ಮೂಲೆಗಳನ್ನು ಸರಿಯಾಗಿ ಕತ್ತರಿಸಿಕೊಂಡು ಚೌಕಾಕಾರಕ್ಕೆ ಹೊಂದಿಸಿಕೊಂಡು ಎಲೆಗಳನ್ನು ಕತ್ತರಿಸಿ. ಅದರ ಮೇಲೆ ಕಡ್ಡಿಯನ್ನು ತೆಗೆದುಕೊಂಡು 3 ಕಡೆ ಚುಚ್ಚಿ. ನಂತರ ಒಂದು ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಅದರೊಳಗೆ ಮಾಡಿಟ್ಟಿರುವ ಎಲೆಗಳನ್ನು ಚಿನ್ನದ ಬಣ್ಣ ಬರುವವರೆಗೂ ಕರಿಯಿರಿ. ಅದಕ್ಕೆ 1 ಚಮಚ ಪೆರಿಪೆರಿ ಮಸಾಲವನ್ನು ಹಾಕಿ ಮಿಶ್ರಣ ಮಾಡಿ. ನಂತರ ಅದನ್ನು ಸೇವಿಸಿ...(ಏಜೆನ್ಸೀಸ್)