

Recipe: ಇಂದಿನ ದಿನಗಳಲ್ಲಿ ಅನೇಕರು ಸಂಜೆ ತಿಂಡಿಗಾಗಿ ಪರಿತಪಿಸುತ್ತಿರುತ್ತಾರೆ. ವಿವಿಧ ಖಾದ್ಯಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಹಾಗೇ ದಿನಿತ್ಯ ಪಕೋಡ, ಗೋಬಿ,ಪಾನಿಪುರಿ ಇಂತಹ ಸ್ನಾಕ್ಸ್ ತಿಂದು ಬೇಜಾರಾಗಿದಿಯೇ? ಹಾಗಿದ್ದರೆ, ಏಕೆ ತಡ ನಿಮ್ಮ ಮನೆಯಲ್ಲಿಯೇ ಈಗಲೇ ತಯಾರಿಸಿ ಬೇಬಿ ಕಾರ್ನ್ ಫ್ರಿಟರ್ಸ್..
* 10-12 ಬೇಬಿ ಕಾರ್ನ್
* 1 ಕಪ್ ಕಡಲೆ ಹಿಟ್ಟು
* 2 ಚಮಚ ಅಕ್ಕಿ ಹಿಟ್ಟು
* 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
* 1/2 ಚಮಚ ಕೆಂಪು ಮೆಣಸಿನಕಾಯಿ ಪುಡಿ
* 1/2 ಚಮಚ ಗರಂ ಮಸಾಲೆ
* 1/2 ಚಮಚ ಜೀರಿಗೆ
* 1/4 ಕಪ್ ನೀರು
* ಕೊತ್ತಂಬರಿ ಸೊಪ್ಪು
* ಉಪ್ಪು
* ಕರಿಯಲು ಎಣ್ಣೆ
ಮೊದಲು ಬೇಬಿ ಕಾರ್ನ್ಗಳನ್ನು ಚೆನ್ನಾಗಿ ತೊಳೆದು ಒಣಗಿಸಿ ಕತ್ತರಿಸಿ ಇಟ್ಟುಕೊಳ್ಳಿ. ನಂತರ ಒಂದು ಬಟ್ಟಲಿಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನಕಾಯಿ ಪುಡಿ, ಗರಂ ಮಸಾಲೆ, ಜೀರಿಗೆ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ. ಸ್ವಲ್ಪ ಸ್ವಲ್ಪ ನೀರು (ಪಕೋಡ ಹಿಟ್ಟಿನಂತೆ) ಸೇರಿಸಿ ಮಿಶ್ರಣ ತಯಾರಿಸಿ. ನಂತರ ಬೇಬಿ ಕಾರ್ನ್ಗಳನ್ನು ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಎಲ್ಲಾ ಕಡೆ ಲೇಪನವಾಗುವಂತೆ ನೋಡಿಕೊಳ್ಳಿ. ಇದಾದ ಬಳಿಕ ಒಂದು ಕಡಾಯಿಗೆ ಎಣ್ಣೆ ಹಾಕಿ ಬಿಸಿಯಾದ ನಂತರ ಒಂದೊಂದಾಗಿ ತೈಲದಲ್ಲಿ ಹಾಕಿ ಚಿನ್ನದ ಬಣ್ಣಕ್ಕೆ ಬರುವವರೆಗೂ ಕರಿಯಿರಿ. ಇದನ್ನು ಟೊಮಟೋ ಸಾಸ್, ಹಸಿರು ಚಟ್ನಿಯೊಂದಿಗೆ ಸೇವಿಸಿ.
(ಏಜೆನ್ಸೀಸ್)