ಕೆಲವೇ ಸಮಯದಲ್ಲಿ ಮಾಡಿ ಕಡಲೆ ಹಿಟ್ಟಿನ ಮೈಸೂರು​ ಪಾಕ್​!! | recipe

untitled-design-2025-08-28t181415560-68b04f2c9655e
Published on

recipe: ನಿಮಗೆ ಬೇಕರಿಯಲ್ಲಿ ಸಿಗುವ ಮೈಸೂರ್​ ಪಾಕ್​ ತಿಂದು ಬೇಜಾರಾಗಿದಿಯಾ? ಹಾಗಿದ್ದರೆ ಕಡಲೆ ಹಿಟ್ಟಿನ ಮೈಸೂರು ಪಾಕ್ ಮಾಡಿ ತಿನ್ನಿ. ಇದನ್ನು ಮಾಡುವುದು ಸರಳವಾದರೂ ಸ್ವಲ್ಪ ಗಮನ ಮತ್ತು ಕೌಶಲ್ಯ ಬೇಕಾದ ಕೆಲಸ. ಬೇಕರಿಯಲ್ಲಿ ಸಿಗುವ ರೀತಿಯಲ್ಲೇ ಈ ಕಡಲೆ ಹಿಟ್ಟಿನ ಮೈಸೂರು ಪಾಕ್​ ಇರುವುದರಿಂದ ನೀವು ಅತಿಬೇಗ ಮನೆಯಲ್ಲಿಯೇ ಮಾಡಿಕೊಂಡು ಸೇವಿಸಬಹುದಾಗಿದೆ.

ಈ ಕೆಳಗಿನ ವಿಧಾನವನ್ನು ಅನುಸರಿಸಿ ರುಚಿಕರವಾದ ಕಡಲೆ ಹಿಟ್ಟಿನ ಮೈಸೂರು ಪಾಕ್ ತಯಾರಿಸಬಹುದು...

ಬೇಕಾಗುವ ಪದಾರ್ಥಗಳು

* 1 ಕಪ್ ಕಡಲೆ ಹಿಟ್ಟು

*  2 ಕಪ್ ಸಕ್ಕರೆ

*  2 ಕಪ್ ತುಪ್ಪ

*  1/2 ಕಪ್ ನೀರು

*  1/4 ಚಮಚ ಏಲಕ್ಕಿ ಪುಡಿ

ಮಾಡುವ ವಿಧಾನ

ಮೊದಲು ಒಂದು ಪಾತ್ರೆಗೆ 1/2 ಕಪ್​ ತುಪ್ಪವನ್ನು ಕಾಯಿಸಿ ಅದಕ್ಕೆ ಕಡಲೆಹಿಟ್ಟನ್ನು ಸೇರಿಸಿ ಹಸಿ ವಾಸನೆ ಹೋಗುವವರೆಗೂ ಚೆನ್ನಾಗಿ ಹುರಿಯಿರಿ. ನಂತರ ಹುರಿದ ಕಡಲೆ ಹಿಟ್ಟನ್ನು ಬೇರೆ ತಟ್ಟೆಗೆ ತೆಗೆದುಕೊಳ್ಳಿ. ಇದಾದ ಬಳಿಕ ಬಾಣಲೆಯಲ್ಲಿ ಸಕ್ಕರೆ ಪಾಕ ರೆಡಿಮಾಡಿಕೊಳ್ಳಿ. ಇನ್ನು ಪಾಕ ಒಂದು ಹದಕ್ಕೆ ಬಂದ ತಕ್ಷಣ ಕಡಲೆಹಿಟ್ಟನ್ನು ಸೇರಿಸಿ ಗಂಟು ಆಗದಂತೆ ನೋಡಿಕೊಳ್ಳಿ. ಇದಕ್ಕೆ ಸ್ವಲ್ಪ ಏಲಕ್ಕಿ ಪುಡಿ ಸೇರಿಸಿ. ಈ ಮಿಶ್ರಣವನ್ನು 10-12 ನಿಮಿಷ ಕಲಿಸುತ್ತಿರಿ. ಇದಾದ ನಂತರ ಒಂದು ಹದಕ್ಕೆ ಬಂದಾಗ ಈ ಮಿಶ್ರಣವನ್ನು ಬಾಣಲೆಯಿಂದ ಹೊರತೆಗೆದು ಒಂದು ತಟ್ಟೆಗೆ ಹಾಕಿ ನಿಮಗೆ ಬೇಕಾದ ರೀತಿ ಆಕಾರ ನೀಡಿ. 10-15 ನಿಮಿಷ ತಣ್ಣಗಾಗಲು ಬಿಟ್ಟು ನಂತರ ಸೇವಿಸಿ.

(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net