

ರಾಣೆಬೆನ್ನೂರ: ರೈತ ರಾಸಾಯನಿಕ ಗೊಬ್ಬರದ ಹೆಸರಿನಲ್ಲಿ ಭೂಮಿಗೆ ಶೇ. 80ರಷ್ಟು ವಿಷ ಹಾಕುತ್ತಿದ್ದಾನೆ. ಇದರಿಂದ ಭೂಮಿ ವಿಷಮಯವಾಗಿ ಮಳೆ ನೀರನ್ನು ಸಹ ಹಿರಿಕೊಳ್ಳುವ ಶಕ್ತಿ ಕಳೆದುಕೊಳ್ಳುತ್ತಿದೆ. ಈ ಬೆಳೆ ತಿನ್ನುವ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ. ಆದ್ದರಿಂದ ನಾವು ಸಾವಯವ ಕೃಷಿಯತ್ತ ವಾಲಬೇಕಿದೆ. ಶುದ್ಧ ಆಹಾರ ಬೆಳೆದು ಪರಿಶುದ್ಧ ಊಟ ಮಾಡಬೇಕಿದೆ ಎಂದು ಮಹಾರಾಷ್ಟ್ರದ ಕನ್ನೇರಿ ಶ್ರೀಕ್ಷೇತ್ರ ಸಿದ್ದಗಿರಿ ಮಹಾಸಂಸ್ಥಾನಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಇಲ್ಲಿಯ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ವತಿಯಿಂದ 17ನೇ ವರ್ಷದ ಗಣೇಶೋತ್ಸವ ನಿಮಿತ್ತ ನಗರದ ಮುನ್ಸಿಪಲ್ ಮೈದಾನದ ಗಣೇಶೋತ್ಸವ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಕೃಷಿ ಮತ್ತು ಆರೋಗ್ಯ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಜಗತ್ತಿನಲ್ಲಿ ಅತಿದೊಡ್ಡ ಫಾರ್ಮಸಿ ಹಬ್ಬ್ ಎಂದರೆ ಅದು ಭಾರತ ಎನ್ನುವಂತಾಗಿದೆ. ಔಷಧ ಉತ್ಪಾದನೆ ಎಂದರೆ ದೊಡ್ಡ ಅಭಿವೃದ್ಧಿ ಎಂದು ತಿಳಿಯಬಾರದು. ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗಬಾರದು, ಅಂದಾಗ ಸುಧಾರಣೆ ಕಾಣಲು ಸಾಧ್ಯ. ಮನುಷ್ಯ ದೈಹಿಕ, ಮಾನಸಿಕ, ಸಾಮಾಜಿಕ ತೊಂದರೆ ಇಲ್ಲವೆಂದರೆ ಮಾತ್ರ ಆರೋಗ್ಯವಂತ ಎಂದು ಹೇಳಬಹುದು. ಶರೀರದಲ್ಲಿ ರಾಸಾಯನಿಕ ಆಹಾರ ತುಂಬಿಕೊಂಡರೆ ಆತ ಆರೋಗ್ಯದಿಂದರಲು ಸಾಧ್ಯವಿಲ್ಲ.
ರೈತರು ಸಾಧ್ಯವಾದಷ್ಟು ಸಾವಯವ ಪದ್ಧತಿ ರೂಢಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಮನೆ ಮನೆಗೆ ಶೌಚಗೃಹ ನಿಮಿರ್ಸಿಕೊಂಡು ಬಯಲು ಶೌಚಮುಕ್ತ ವಾಗಬೇಕು. ಹಿಂದಿನ ಆಹಾರ ಪದ್ಧತಿಯಂತೆ ಆಯಾ ಋತುವಿಗೆ ತಕ್ಕಂತೆ ಆಹಾರ ಸೇವಿಸಬೇಕು. ಹಣ್ಣು, ತರಕಾರಿ, ಕಾಳು ಸೇರಿ ಪ್ರತಿಯೊಂದನ್ನು ಸಾವಯವ ಉಪಯೋಗಿಸಬೇಕು ಎಂದರು.
ರಾಷ್ಟ್ರ, ಧರ್ಮ ಮತ್ತು ಸಂ ಎಂಬ ವಿಷಯ ಕುರಿತು ಆರ್ಎಸ್ಎಸ್ ಧಾರವಾಡ ವಿಭಾಗದ ಸಂಘಚಾಲಕ ಗೋವಿಂದಪ್ಪ ಗೌಡಪ್ಪಗೋಳ ಮಾತನಾಡಿ, ಭಾರತ ದೇಶ ವಿಶ್ವಗುರು ಆಗಬೇಕು ಹಾಗೂ ಹಿಂದುರಾಷ್ಟ್ರವಾಗಬೇಕು ಎಂಬ ಪರಿಕಲ್ಪನೆಯೊಂದಿಗೆ ಹೆಗಡೆವಾರು ಆರ್ಎಸ್ಎಸ್ ಸ್ಥಾಪಿಸಿದರು. ಇಂದು ಅವರ ಕಲ್ಪನೆಯತ್ತ ಭಾರತ ಸಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಪ್ರತಿಯೊಬ್ಬರೂ ನಾವೆಲ್ಲ ಹಿಂದು ಎನ್ನುವ ಭಾವನೆ ತಾಳಬೇಕು. ಇಲ್ಲವಾದರೆ ಈ ಹಿಂದೆ ಪರಕೀಯರು ನಮ್ಮನ್ನು ಆಳಿದಂತೆ ಮುಂದೆಯೂ ಆ ದುಸ್ಥಿತಿ ಬರುವುದಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಹಿಂದುಗಳು ಯಾವಾಗ ರ್ದುಬಲ ಆಗುತ್ತಾರೋ ಆಗ ದೇಶ ರ್ದುಬಲ ಆಗುತ್ತದೆ. ಹಿಂದುಗಳು ಅಲ್ಪಸಂಖ್ಯಾತರಾದ ಕಾರಣ ಪಾಕಿಸ್ತಾನ, ಅಪಘಾನಿಸ್ತಾನ ಭಾರತದಿಂದ ಬೇರ್ಪಡಿಸಬೇಕಾಯಿತು. ಆದರೆ ಹಿಂದುಗಳು ಸಂಘಟಿತರಾದಾಗ ಮಾತ್ರ ದೇಶ ಸದೃಢವಾಗಿ ಎಲ್ಲರೂ ಸಮಾಧಾನ, ಶಾಂತಿಯಿಂದ ಬದುಕಲು ಸಾಧ್ಯ. ಹಿಂದುತ್ವ ಉಳಿಯಬೇಕಾದರೆ ಹಿಂದು ಸಂಘಟಕರು ಹಿಂದುಗಳು ಬಲಿಷ್ಠವಾಗಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂದ ಪದಾಧಿಕಾರಿಗಳು, ಸಂಟಕರು, ವಿವಿಧ ಸಂ&ಸಂಸ್ಥೆ ಪದಾಧಿಕಾರಿಗಳು ಉಪಸ್ಥಿತರಿದ್ದರು.