

ರಾಣೆಬೆನ್ನೂರ: ನಿರಂತರ ಮಳೆಯಿಂದಾಗಿ 6 ಲಕ್ಷ ರೂ. ಖರ್ಚು ಮಾಡಿ ಬೆಳೆದಿದ್ದ ತೊಂಡಿಕಾಯಿ ಬಳ್ಳಿ ಸಂರ್ಪೂಣ ಹಾಳಾಗಿ ಹೋಗಿರುವ ಟನೆ ತಾಲೂಕಿನ ಮಾಕನೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಕ್ಕೀರಪ್ಪ ಹಲಗೇರಿ ಎಂಬುವರು ಒಂದೂವರೆ ಎಕರೆ ಜಮೀನಿನಲ್ಲಿ 6 ಲಕ್ಷ ರೂ. ಖರ್ಚು ಮಾಡಿ ಸಿಮೆಂಟ್ ಕಂಬ ಹಾಗೂ ತಂತಿಯ ಬೇಲಿ ಸಿದ್ಧಪಡಿಸಿ ತೊಂಡಿಕಾಯಿ ಬಳ್ಳಿಯ ತೋಟ ಮಾಡಿಕೊಂಡಿದ್ದರು. ಆದರೆ, ತಾಲೂಕಿನಲ್ಲಿ ನಿರಂತರವಾಗಿ ಸುರಿದ ಮಳೆಯ ಪರಿಣಾಮ ವಿಪರೀತ ಶೀತವಾಗಿ ಬಳ್ಳಿ ಸಂರ್ಪೂಣ ಹಾಳಾಗಿದೆ.
ಇದರಿಂದ ರೈತ ಕ್ಕೀರಪ್ಪ ಆಥಿರ್ಕವಾಗಿ ನಷ್ಟ ಅನುಭವಿಸಿದ್ದು ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾನೆ. ರೈತನ ತೋಟಕ್ಕೆ ಶಾಸಕ ಪ್ರಕಾಶ ಕೋಳಿವಾಡ ಸೋಮವಾರ ಭೇಟಿ ನೀಡಿದ್ದು, ಬೆಳೆಹಾನಿ ಕುರಿತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜತೆ ಮಾತನಾಡಿ ಸರ್ಕಾರದಿಂದ ಪರಿಹಾರ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ರೈತರಾದ ಈರಣ್ಣ ಹಲಗೇರಿ, ಭೀಮೇಶ ಪೂಜಾರ, ಕರೇಗೌಡ ಪಾಟೀಲ ಮತ್ತಿತರರಿದ್ದರು.