

ರಾಣೆಬೆನ್ನೂರ: ತಾಲೂಕಿನ ಮಾಕನೂರ ಗ್ರಾಮದ ಮೂರಾರ್ಜಿ ವಸತಿಯುತ ಶಾಲೆಯ ಫಲಿತಾಂಶ ಸತತ 13ನೇ ಬಾರಿಗೂ ಶೇ. 100ರಷ್ಟಾಗಿದೆ.
ಪರೀಕ್ಷೆಗೆ ಹಾಜರಾದ 50 ವಿದ್ಯಾರ್ಥಿಗಳಲ್ಲಿ 24 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಉಳಿದ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿ ಬಸವರಾಜ ಕೋಲಕಾರ ಶೇ. 97.76ರಷ್ಟು ಅಂಕಗಳಿಸಿ ಶಾಲೆಗೆ ಪ್ರಥಮ, ಗಾಯತ್ರಿ ರಿತ್ತಿ ಶೇ. 97.60ರಷ್ಟು ಅಂಕಗಳಿಸಿ ದ್ವಿತೀಯ, ಪ್ರೀಯಾ ಓಲೇಕಾರ ಶೇ. 97.44ರಷ್ಟು ಅಂಕಗಳಿಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿ ಮಿತ್ರ ಸಹಕಾರಿ…
ವಿದ್ಯಾರ್ಥಿ ಬಸವರಾಜ ಕೋಲಕಾರ ವಿಜಯವಾಣಿಯೊಂದಿಗೆ ಮಾತನಾಡಿ, ನಮ್ಮ ಫಲಿತಾಂಶ ಇಷ್ಟೊಂದು ಚನ್ನಾಗಿ ಬರಲು ನಮ್ಮ ಶಿಕ್ಷಕರು ನಮಗೆ ಹೇಳಿಕೊಡುತ್ತಿದ್ದ ಪಾಠದ ಫಲ. ಇದರ ಜತೆಗೆ ನಮ್ಮ ಶಾಲೆಗೆ ನಿತ್ಯವೂ ವಿಜಯವಾಣಿ ವಿದ್ಯಾರ್ಥಿ ಮಿತ್ರ ಪತ್ರಿಕೆ ಬರುತ್ತಿತ್ತು. ನಾವು ಎಲ್ಲರೂ ತಪ್ಪದೆ ಪತ್ರಿಕೆ ಓದುತ್ತಿದ್ದೆವು. ಅದರಲ್ಲಿ ಬರುವ ಪ್ರಶ್ನೆಗಳ ಮಾಹಿತಿ, ನಮ್ಮ ವಿಷಯಗಳ ಮಾಹಿತಿಯನ್ನು ನಾವು ಸಂಗ್ರಹಿಸಿಟ್ಟುಕೊಂಡು ಅಧ್ಯಯನ ಮಾಡುತ್ತಿದ್ದೇವು. ಇದರಿಂದ ಪರೀಕ್ಷೆಯಲ್ಲಿ ಉತ್ತರಗಳನ್ನು ಸರಳವಾಗಿ ಬರೆಯಲು ಅನುಕೂಲವಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡರು.