ರಾಜ್ಯಸಭಾ ಸದಸ್ಯರ ಅಪಾರ್ಟ್​ಮೆಂಟ್​ನಲ್ಲಿ ಭಾರಿ ಅಗ್ನಿ ಅವಘಡ; ಹೊತ್ತಿ ಉರಿದ ಮನೆಗಳು| Massive Fire

ವಿಜಯವಾಣಿ (64)
Published on

New Delhi: ದೆಹಲಿಯಲ್ಲಿ ರಾಜ್ಯಸಭಾ ಸದಸ್ಯರಿಗೆ ಹಂಚಿಕೆಯಾದ ಮನೆಗಳಿರುವ ಬಿಡಿ ಮಾರ್ಗದ ಬ್ರಹ್ಮಪುತ್ರ ಅಪಾರ್ಟ್​ಮೆಂಟ್​ನಲ್ಲಿ ಭಾರಿ ಅಗ್ನಿ ಅವಘಡ(Massive Fire) ಸಂಭವಿಸಿದ್ದು, ಹಲವು ಮನೆಗಳು ಸುಟ್ಟು ಭಸ್ಮ ಆಗಿವೆ. ಸ್ಥಳದಲ್ಲಿ 6 ಅಗ್ನಿಶಾಮಕದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ ಎಂದು ವರದಿಯಾಗಿದೆ.

ಅಗ್ನಿ ಅವಘಡಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಅಪಾರ್ಟ್​ಮೆಂಟ್​ನಲ್ಲಿರುವ ಅಗ್ನಿಶಾಮಕದಳ ಘಟಕ ಕಾರ್ಯನಿರ್ವಹಿಸುತ್ತಿಲ್ಲ. ಟ್ಯಾಂಕ್​ ಮತ್ತು ಪೈಪ್​ಲೈನ್​ಗಳಲ್ಲಿ ನೀರಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ಆರು ಅಗ್ನಿಶಾಮಕದಳ ವಾಹನಗಳು ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿವೆ ಎನ್ನಲಾಗಿದೆ.

ಇಂದು(ಅ. 18) ಮಧ್ಯಾಹ್ನ 1.20ರ ಸುಮಾರಿಗೆ  ಬೆಂಕಿಯನ್ನು ನೋಡಿದ ಬಳಿಕ ನಾವು ಬೆಂಕಿ ನಂದಿಸುವ ಸೌಲಭ್ಯವನ್ನು ಪರಿಶೀಲಿಸಿದೆವು, ಆದರೆ ನೀರು ಇರಲಿಲ್ಲ. ಅಗ್ನಿಶಾಮಕ ಘಟಕ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net