ಮಹಿಷಾಸುರನಿಗೆ ಸೆನ್ಸಾರ್ ಮಂಡಳಿ ಅಸ್ತು; 15ಕ್ಕೆ ಟ್ರೇಲರ್​ ಬಿಡುಗಡೆ

Untitled
Published on

ಉದಯ್ ಪ್ರಸನ್ನ ನಿರ್ದೇಶನದ "ಮಹಿಷಾಸುರ" ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ನೀಡಿ, ಚಿತ್ರವನ್ನು ತಮಿಳಿನ "ಅಸುರನ್" ಚಿತ್ರಕ್ಕೆ ಹೋಲಿಸಿರುವುದು ಚಿತ್ರತಂಡ ಮತ್ತು ನಿರ್ದೇಶಕರ ಸಂತಸಕ್ಕೆ ಕಾರಣವಾಗಿದೆ.

ಕರೊನಾದಿಂದಾಗಿ ಸಾರ್ವಜನಿಕ ಪ್ರದರ್ಶನಕ್ಕೆ ವಿಳಂಬವಾಗಿದ್ದು "ಮೆಳೇಕೋಟೆ ಟೂರಿಂಗ್ ಟಾಕೀಸ್" ಹಾಗೂ "ಮೈತ್ರಿ ಪ್ರೊಡಕ್ಷನ್" ಸಹಯೋಗದಿಂದ ಆಗಸ್ಟ್ 15ರಂದು ಡಿ ಬೀಟ್ಸ್ ನಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ. ಬಳಿಕ ಚಿತ್ರಮಂದಿರಗಳು ಚಿತ್ರಪ್ರದರ್ಶನ ಪ್ರಾರಂಭಿಸಿದ ನಂತರ ರಾಜ್ಯದೆಲ್ಲೆಡೆ ಮಹಿಷಾಸುರ ಸಿನಿಮಾ ಬಿಡುಗಡೆ ಮಾಡುವುದು ತಂಡದ ಪ್ಲಾನ್​. ಈ ಚಿತ್ರದಲ್ಲಿ ಅರ್ಜುನ್, ಬಿಂದು ಶ್ರೀ, ಮಂಜು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಇನ್ನು ನಿರ್ದೇಶಕ ಉದಯ್ ಪ್ರಸನ್ನ ಅವರ ನಿರ್ದೇಶನದ ಎರಡನೆ ಚಿತ್ರ "ಬೆಣ್ಣೆಗುಲ್ಕನ್" ಪ್ಯಾನ್ ಇಂಡಿಯಾ ಚಿತ್ರವಾಗಿ ಮೂಡಿ ಬರಲಿದೆ. ಚಿತ್ರದ ಕಥಾವಸ್ತು ಮತ್ತು ನಿರೂಪಣೆಯು ವಿಭಿನ್ನವಾಗಿದ್ದು, ಎಲ್ಲ ವರ್ಗದ ಜನರನ್ನು ಮನರಂಜಿಸುವ ಸದಭಿರುಚಿಯ ಚಿತ್ರವಾಗಿರಲಿದೆ ಎಂಬುದು ತಂಡದ ಭರವಸೆಯ ಮಾತುಗಳು. ಈ ಚಿತ್ರವು "ದೀಕ್ಷಾ ಸಮೂಹ" ಹಾಗೂ "ಮೆಳೇಕೋಟೆ ಟೂರಿಂಗ್ ಟಾಕೀಸ್" ಬ್ಯಾನರ್ ನಲ್ಲಿ ಮೂಡಿ ಬರಲಿದೆ. ಸದ್ಯ ಚಿತ್ರತಂಡವು ಕಲಾವಿದರ ಅನ್ವೇಷಣೆಯಲ್ಲಿ ತೊಡಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net