ಮಹೇಶ್ ಬಾಬು ಪುತ್ರಿ ಸಿತಾರಾ ಧರಿಸಿದ ಈ ಗೌನ್ ಬೆಲೆ ಎಷ್ಟೆಂದು ಊಹಿಸಬಲ್ಲಿರಾ?

sitara
Published on

ಹೈದರಾಬಾದ್: ಮಹೇಶ್ ಬಾಬು ಅವರ ಪುತ್ರಿ ಸಿತಾರಾ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಅವರ ತಾಯಿ ನಮ್ರತಾ ಶಿರೋಡ್ಕರ್ ಅವರೊಂದಿಗೆ ಮೊದಲ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡರು. ನಮಗೆಲ್ಲರಿಗೂ ತಿಳಿದಿರುವಂತೆ, ಸ್ಟಾರ್ ಕಿಡ್ ಈ ಈವೆಂಟ್‌ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದು, ಸಿತಾರಾ ಅವರ ಫ್ಯಾಶನ್ ಸೆನ್ಸ್ ಅಭಿಮಾನಿಗಳಿಗೆ ಮಾತ್ರವಲ್ಲ, ಮಾಧ್ಯಮಗಳನ್ನೂ ಆಕರ್ಷಿಸಿತು.

ಸಿತಾರಾ ಘಟ್ಟಮನೇನಿ, ತರುಣ್ ತಹಿಲಿಯಾನಿ ಅವರ ಬೂದು ಬಣ್ಣದ ಒನ್-ಶೋಲ್ಡರ್ ಗೌನ್ ಮೂಲಕ ಎಲ್ಲರ ಗಮನ ಸೆಳೆದರು. ಅಂದಹಾಗೆ ನೀವು ಅದರ ಬೆಲೆಯನ್ನು ಊಹಿಸಬಲ್ಲಿರಾ?. ಹೌದು, ಸಿತಾರಾ ಅವರ ಈ ಫ್ಯಾಷನ್ ಗೌನ್ ಬೆಲೆ 1,42,900 ರೂ.

ಈವೆಂಟ್‌ನಲ್ಲಿ ಸಿತಾರಾ ಘಟ್ಟಮನೇನಿ ಕಾಣಿಸಿಕೊಂಡ ರೀತಿ ಅವರ ಮುಂದಿನ ಭವಿಷ್ಯದ ಬಗ್ಗೆ ಸೂಚಿಸುತ್ತಿದೆ ಎಂದು ಅಭಿಮಾನಿಗಳು ಹೇಳಿದ್ದು, ಅವರು ಇಂಡಸ್ಟ್ರಿಗೆ ಬರುವ ಬಗ್ಗೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಒಂದು ವೇಳೆ ಬಂದದ್ದೇ ಆದಲ್ಲಿ ಸಿತಾರಾ ಫ್ಯಾಷನ್ ಮತ್ತು ಮನರಂಜನೆಯ ಪ್ರಪಂಚದಲ್ಲಿ ಮಿಂಚುವುದಂತೂ ದಿಟ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net