

ಹೈದರಾಬಾದ್: ಟಾಲಿವುಡ್ ನಟ ಮಹೇಶ್ ಬಾಬು ಇತ್ತೀಚೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಹೇಶ್ ಭಾಗವಹಿಸಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳ ಕಣ್ಣು ಮಹೇಶ್ ಬಾಬು ಅವರು ಧರಿಸಿದ ಸ್ವೆಟ್‌ಶರ್ಟ್ ಮೇಲೆ ಬಿದ್ದಿದೆ.
ಅಣ್ಣನ ಜೊತೆಗಿರುವುದು ತುಂಬಾ ಖುಷಿ ತಂದಿದೆ ಎಂದು ವೆಂಕಟೇಶ್ ಜೊತೆಗಿರುವ ಚಿತ್ರವನ್ನು ಮಹೇಶ್ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮಹೇಶ್ ಬಾಬು ಅವರು ಆರೆಂಜ್ ಕಲರ್ ಸ್ವೆಟ್ ಶರ್ಟ್ ನಲ್ಲಿ ಸ್ಟೈಲಿಶ್ ಆಗಿ ಕಾಣುತ್ತಿದ್ದರು. ಮಹೇಶ್ ಧರಿಸಿರುವ ‘ಹರ್ಮ್ಸ್’ ಸ್ವೆಟ್‌ಶರ್ಟ್ ಬೆಲೆ ರೂ. 1,21,330 ಆಗಿರುತ್ತದೆ. ಸದ್ಯ ಇದಕ್ಕೆ ಸಂಬಂಧಿಸಿದ ಫೋಟೋಗಳು ಹರಿದಾಡುತ್ತಿವೆ.
ಹರ್ಮ್ಸ್ ಚರ್ಮದ ವಸ್ತುಗಳು, ಜೀವನಶೈಲಿ ಬಿಡಿಭಾಗಗಳು, ಗೃಹೋಪಯೋಗಿ ವಸ್ತುಗಳು, ಆಭರಣಗಳು, ಕೈಗಡಿಯಾರಗಳು ಮತ್ತು ಬಟ್ಟೆ ಸಿದ್ಧಪಡಿಸುತ್ತದೆ.
ಮಹೇಶ್ ಬಾಬು ನಟನೆಯ ತ್ರಿವಿಕ್ರಮ್ ನಿರ್ದೇಶನದಲ್ಲಿ ಗುಂಟೂರು ಕರಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಸಿನಿಮಾದ ಬಗ್ಗೆ ಮತ್ತಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಮತ್ತು ಇಂದು ಈ ಚಿತ್ರದ ಮೊದಲ ಸಿಂಗಲ್ ಧಮ್ ಮಸಾಲಾ ಹಾಡು ಬಿಡುಗಡೆಯಾಗಲಿದೆ. ಮುಂದಿನ ವರ್ಷ ಸಂಕ್ರಾಂತಿ ಉಡುಗೊರೆಯಾಗಿ ಜನವರಿ 12 ರಂದು ಚಿತ್ರ ಬಿಡುಗಡೆಯಾಗಲಿದೆ.
ಈ ಚಿತ್ರದಲ್ಲಿ ಮಹೇಶ್ ಫುಲ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಹೇಶ್ ಜೊತೆಗೆ ಮೀನಾಕ್ಷಿ ಚೌಧರಿ ಮತ್ತು ಶ್ರೀಲೀಲಾ ನಾಯಕಿಯರಾಗಿ ನಟಿಸುತ್ತಿದ್ದಾರೆ.ಜಗಪತಿ ಬಾಬು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.