2005ರ ಕಲ್ಟ್​ ಚಿತ್ರ ರೀ-ರಿಲೀಸ್​ಗೆ ಸಜ್ಜು; ಐಮ್ಯಾಕ್ಸ್​ನಲ್ಲಿ ತೆರೆಕಾಣಲಿದೆ 'ಪ್ರಿನ್ಸ್'​ ಚಿತ್ರ | Mahesh Babu

ವಿಜಯವಾಣಿ - 2025-05-02T134006.833
Published on

Mahesh Babu: ಟಾಲಿವುಡ್​ ಪ್ರಿನ್ಸ್, ನಟ ಮಹೇಶ್​ ಬಾಬು ಅಭಿನಯದ ಬ್ಲಾಕ್​ಬಸ್ಟರ್​ ತೆಲುಗು ಸಿನಿಮಾ 'ಅಥಡು' ಇದೀಗ ರಿ-ರಿಲೀಸ್​ಗೆ ಸಜ್ಜಾಗಿದೆ. 2005ರಲ್ಲಿ ಬಿಡುಗಡೆಯಾದ ಸೂಪರ್​ಹಿಟ್​ ಚಿತ್ರ ಅಂದಿನ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಕಂಡಿತ್ತು. ಮಹೇಶ್​ ಬಾಬು- ತ್ರಿಶಾ ಕೃಷ್ಣನ್​ ಮುಖ್ಯಭೂಮಿಕೆಯಲ್ಲಿ ನಟಿಸಿದ ಹಾಗೂ ತ್ರಿವಿಕ್ರಮ್ ನಿರ್ದೇಶನದ ಈ ಚಿತ್ರವು ಮರುಬಿಡುಗಡೆಗೆ ಎದುರುನೋಡುತ್ತಿದೆ.

20 ವರ್ಷಗಳ ಬಳಿಕ ಮತ್ತೆ ಚಿತ್ರಮಂದಿಗರಳಿಗೆ ಎಂಟ್ರಿ ಕೊಡಲು ಸಜ್ಜಾಗಿರುವ ಪ್ರಿನ್ಸ್ ಅಭಿನಯದ 'ಅಥಡು', ಐಮ್ಯಾಕ್ಸ್ ಸ್ವರೂಪದಲ್ಲಿ ರೀ-ರಿಲೀಸ್​ ಆಗುತ್ತಿರುವ ಮೊದಲ ಭಾರತೀಯ ಚಿತ್ರ ಎಂಬ ಪಟ್ಟಿಗೆ ಸೇರಿದೆ. ಈ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನು ಸ್ಥಾಪಿಸಲಿದೆ. ತಾಂತ್ರಿಕವಾಗಿ 4K ಅಲ್ಟ್ರಾ ಎಚ್​ಡಿ ರೆಸಲ್ಯೂಶನ್ ಮತ್ತು ಡಾಲ್ಬಿ ಅಟ್ಮಾಸ್​ ಆಡಿಯೊ ಮಾಸ್ಟರಿಂಗ್‌ನೊಂದಿಗೆ ಅಥಡು ಚಿತ್ರಮಂದಿರಗಳಿಗೆ ಅಪ್ಪಳಿಸಲಿದೆ.

ವಿಶೇಷವಾಗಿ ಮಹೇಶ್​ ಬಾಬು ಜನ್ಮದಿನದಂದೇ (ಆ.09) ಈ ಚಿತ್ರವನ್ನು ತೆಲುಗು ರಾಜ್ಯಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಮರುಬಿಡುಗಡೆಗೆ ಇನ್ನೂ 100 ದಿನಗಳು ಬಾಕಿ ಉಳಿದಿರುವಾಗಲೇ ಚಿತ್ರದ ವಿಶೇಷ ಕೌಂಟ್‌ಡೌನ್ ಪೋಸ್ಟರ್ ಹೊರಬಿದ್ದಿದೆ. ಈ ಸುದ್ದಿ ಮಹೇಶ್ ಬಾಬು ಅವರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದು, ನೆಚ್ಚಿನ ನಟನ ಹುಟ್ಟುಹಬ್ಬದ ದಿನವೇ ಸಿನಿಮಾ ತೆರೆ ಕಾಣಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net