ತಂದೆಗೆ ತಕ್ಕ ಮಗಳು; ಹುಟ್ಟುಹಬ್ಬದಂದು ಬಡ ಮಕ್ಕಳಿಗೆ ಸೈಕಲ್ ಗಿಫ್ಟ್​​ ನೀಡಿದ ಮಹೇಶ್ ಬಾಬು ಪುತ್ರಿ ಸಿತಾರಾ

sitara
Published on

ಹೈದರಾಬಾದ್​: ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಪುತ್ರಿ ಸಿತಾರಾ ಸಿನಿಮಾಗೆ ಪ್ರವೇಶಿಸುವ ಮೊದಲು ಸಾಕಷ್ಟು ಪ್ರೀತಿ ಮತ್ತು ಖ್ಯಾತಿಯನ್ನು ಪಡೆಯುತ್ತಿದ್ದಾರೆ. ಹುಟ್ಟುಹಬ್ಬದ ಆಚರಣೆಯ ಸಂಭ್ರಮದಲ್ಲಿರುವ ಸ್ಟಾರ್​ ಕಿಡ್​​ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡು ಸುದ್ದಿಯಲ್ಲಿದ್ದಾರೆ.

2012 ಜುಲೈ 20ರಂದು ಜನಿಸಿದ ಸಿತಾರಾ ಇಂದು ತಮ್ಮ 11 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸೆಲೆಬ್ರಿಟಿಯಾಗಿರುವ ಸಿತಾರಾ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವುದಕ್ಕಿಂತ ಸರಳವಾಗಿ ಮತ್ತು ಚಿಂತನಶೀಲವಾಗಿ ಆಚರಿಸಿಕೊಂಡಿದ್ದಾರೆ. ಸಿತಾರಾ ತಮ್ಮ ಹುಟ್ಟುಹಬ್ಬವನ್ನು ಮಹೇಶ್ ಬಾಬು ಫೌಂಡೇಶನ್‌ನ ಮಕ್ಕಳೊಂದಿಗೆ ಆಚರಿಸಿಕೊಂಡರು.

ಹುಟ್ಟುಹಬ್ಬದಂದು ಬಡ ಮಕ್ಕಳಿಗೆ ಉಡುಗೊರೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಶಾಲೆಗೆ ನಡೆದುಕೊಂಡು ಹೋಗುತ್ತಿದ್ದವರಿಗೆ  ಸಿತಾರಾ ಸೈಕಲ್ ಖರೀದಿಸಿದರು. ಅವರೆಲ್ಲರ ನಡುವೆ ಕೇಕ್ ಕತ್ತರಿಸಿದ ನಂತರ ಸಿತಾರಾ ಸೈಕಲ್​​ಗಳನ್ನು ಅವರಿಗೆ ಉಡುಗೊರೆಯಾಗಿ ನೀಡಿದರು. ಈ ವಿಷಯವನ್ನು ಅವರ ತಾಯಿ ನಮ್ರತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಸಿತಾರಾ ಅವರನ್ನು ಹೊಗಳುತ್ತಿದ್ದಾರೆ.

ಜಾಹೀರಾತಿಗೆ ತೆಗೆದುಕೊಂಡ ಸಂಭಾವನೆಯನ್ನು ಚಾರಿಟಿಗೆ ದೇಣಿಗೆಯಾಗಿ ನೀಡಿ ಎಲ್ಲರ ಮನವನ್ನು ಕದ್ದಿದ್ದಾರೆ. ಈಗ ಮತ್ತೊಂದು ಮಹತ್ಕಾರ್ಯ ಮಾಡಿದ್ದು ತಂದೆಗೆ ತಕ್ಕ ಮಗಳು ಅನ್ನಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net