ಬಾಕ್ಸ್​ ಆಫೀಸ್​ನಲ್ಲಿ ‘ಮಹಾವತಾರ ನರಸಿಂಹ’ ಘರ್ಜನೆ; ಹೊಸ ದಾಖಲೆ ಬರೆದ ಅನಿಮೇಷನ್​ ಚಿತ್ರ | Mahavatar Narsimha

ವಿಜಯವಾಣಿ - 2025-08-04T132510.603
Published on

Mahavatar Narsimha: ಇದೇ ಜು.25ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ‘ಮಹಾವತಾರ ನರಸಿಂಹ’ ಅನಿಮೇಟೆಡ್ ಚಿತ್ರ ಸದ್ಯ ಭಾರತೀಯ ಬಾಕ್ಸ್ ಆಫೀಸ್​ನಲ್ಲಿ ತನ್ನದೇ ವಿಶೇಷ ದಾಖಲೆಯನ್ನು ಬರೆದಿದೆ. ಯಾವುದೇ ಸ್ಟಾರ್​ ಕಲಾವಿದರು ಅಥವಾ ಬಹುದೊಡ್ಡ ಪಾತ್ರವರ್ಗವಿಲ್ಲದೆ ರಿಲೀಸ್ ಆದ ಈ ಚಿತ್ರವು ಇದೀಗ ಭಾರತೀಯ ಚಿತ್ರೋದ್ಯಮದಲ್ಲಿ ಹೊಸ ಮೈಲಿಗಲ್ಲು ತಲುಪಿದೆ.

ಅಶ್ವಿನ್ ಕುಮಾರ್​ ನಿರ್ದೇಶನದ ಹಾಗೂ ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸಿದ ಕ್ಲೀಮ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಶಿಲ್ಪಾ ಧವನ್, ಕುಶಾಲ್ ದೇಸಾಯಿ, ಚೈತನ್ಯ ದೇಸಾಯಿ ನಿರ್ಮಿಸಿದ ಈ ಚಿತ್ರ ಬಿಡುಗಡೆಗೊಂಡು ಇಂದಿಗೆ 10 ದಿನಗಳನ್ನು ಪೂರೈಸಿದೆ. ಕೇವಲ 6 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಮಹಾವತಾರ ನರಸಿಂಹ, ಇಲ್ಲಿಯವರೆಗೆ ಜಾಗತಿಕವಾಗಿ 105 ಕೋಟಿ ರೂ. ಗಳಿಕೆಯನ್ನು ಕಂಡಿದೆ. 100 ಕೋಟಿ ರೂ. ಗಳಿಸಿದ ಮೊದಲ ಭಾರತೀಯ ಅನಿಮೇಷನ್ ಚಿತ್ರವಾಗಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಈ ಕಲೆಕ್ಷನ್​ಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.

ಪ್ರತಿ ವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ ಅಂಗಳದಿಂದ ಸಾಕಷ್ಟು ಸಿನಿಮಾಗಳು ತೆರೆಗೆ ಅಪ್ಪಳಿಸುತ್ತಿವೆ. ಈ ಪೈಕಿ ಪ್ರಸ್ತುತ, 'ಸು ಫ್ರಮ್ ಸೋ' (ಕನ್ನಡ), 'ಮಹಾವತಾರ ನರಸಿಂಹ' (ಹಿಂದಿ), 'ಸೈಯಾರಾ' (ಹಿಂದಿ), 'ಕಿಂಗ್​ಡಮ್' (ತೆಲುಗು)​ ಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಕಲೆಕ್ಷನ್ ಕಾಣುವುದರ ಜೊತೆಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದಿವೆ ಹಾಗೂ ಭರ್ಜರಿ ಪೈಪೋಟಿ ಕೊಡುತ್ತಿವೆ,(ಏಜೆನ್ಸೀಸ್).​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net