VIDEO| ಮಣಿಪುರದ ಘಟನೆಗೆ ಕಣ್ಣೀರಿಡದ ಬಿಜೆಪಿ, ಮಹಿಳಾ ಮೀಸಲಾತಿ ಬಗ್ಗೆ ಮಾತನಾಡುತ್ತೆ: ಅರವಿಂದ್ ಸಾವಂತ್

Untitled design - 2023-09-20T141542.366
Published on

ಮುಂಬೈ: ಮಂಗಳವಾರ ದೆಹಲಿಯ ನೂತನ ಸಂಸತ್​ನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಪ್ರಧಾನಿ ನರೇಂದ್ರ ಮೋದಿ ಮಂಡಿಸಿದ ಬಳಿಕ ವಿಪಕ್ಷಗಳಲ್ಲಿ ಭಾರೀ ಚರ್ಚೆಗಳು ಬುಗಿಲೆದ್ದಿದ್ದು, ಈ ಕುರಿತು ಕೆಲವು ನಾಯಕರು ವ್ಯಂಗ್ಯವಾಡಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ ಮಂಡನೆ ಕುರಿತು ಪ್ರತಿಕ್ರಿಯಿಸಿದ ಶಿವಸೇನೆ ನಾಯಕ ಎ.ಜಿ. ಸಾವಂತ್, "ಬಿಜೆಪಿ ತಮ್ಮ ವೈಫಲ್ಯಗಳನ್ನು ಮರೆಮಾಚಲು ರಾಜಕೀಯ ಮಾಡುತ್ತಿದ್ದಾರೆ. ಮಹಿಳೆಯರಿಗೆ ಮೀಸಲಾತಿ ಕೊಡುವ ಬಗ್ಗೆ ಮಾತನಾಡುವ ಇವರು, ಮಣಿಪುರ ಘಟನೆಗೆ ಏಕೆ ಕಣ್ಣೀರು ಹಾಕಲಿಲ್ಲ? ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದಾಗ ಏನು ಮಾಡಿದರು?" ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ ಮಂಡನೆ ವೇಳೆ ಮಾತನಾಡಿದ ಪ್ರಧಾನಿಗಳು, “ಇದನ್ನು ಜಾರಿಗೊಳಿಸಲು ದೇವರು ನನ್ನನ್ನು ಆಯ್ಕೆ ಮಾಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಹಲವಾರು ಬಾರಿ ಮಂಡಿಸಲಾಗಿತ್ತು. ಆದ್ರೆ, ಹಲವು ಬಾರಿ ಇದಕ್ಕೆ ತಡೆ ಎದುರಾಗಿತ್ತು. ಇದನ್ನು ಜಾರಿಗೊಳಿಸಲು ಭಗವಂತ ನನ್ನನ್ನು ಆಯ್ಕೆ ಮಾಡಿದ್ದಾರೆ. ನಮ್ಮ ಸರ್ಕಾರ ಇಂದು ಉಭಯ ಸದನಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಕುರಿತು ಹೊಸ ಮಸೂದೆಯನ್ನು ತರುತ್ತಿದೆ” ಎಂದು ಹೊಸ ಸಂಸತ್​ನಲ್ಲಿ ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net