ಯುಕೆ ವಿದೇಶಿ ನೇರ ಹೂಡಿಕೆ: ಭಾರತದ ಮೊದಲ ಮೂರು ರಾಜ್ಯಗಳಲ್ಲಿ ಕರ್ನಾಟಕ! ಎಫ್​ಡಿಐ ಎಷ್ಟು?

money
Published on

ಲಂಡನ್: ಯುಕೆಗೆ ವಿದೇಶಿ ನೇರ ಹೂಡಿಕೆಯನ್ನು (ಎಫ್‌ಡಿಐ) ತರುವ ಭಾರತದ ಮೊದಲ ಮೂರು ರಾಜ್ಯಗಳು ಮಹಾರಾಷ್ಟ್ರ ನಂತರ ಕರ್ನಾಟಕ ಮತ್ತು ದೆಹಲಿ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಮತ್ತು ಭಾರತದ ಹೈಕಮಿಷನ್ ತಯಾರಿಸಿದ ಹೊಸ ಜಂಟಿ ವರದಿ ತಿಳಿಸಿದೆ.

ಈ ವಾರದ ಆರಂಭದಲ್ಲಿ ಲಂಡನ್‌ನಲ್ಲಿ ತಯಾರಿಸಲಾದ ಯುಕೆಯಲ್ಲಿನ ಭಾರತೀಯ ಕಂಪನಿಗಳ ಪಟ್ಟಿಯಲ್ಲಿ ಮಹಾರಾಷ್ಟ್ರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕಂಪನಿಗಳು 2023 ರಲ್ಲಿ ಯುಕೆ ಗೆ 20 ಪ್ರತಿಶತದಷ್ಟು ಎಫ್‌ಡಿಐ ಅನ್ನು ತಂದಿರುವುದಾಗಿ ವರದಿಯಾಗಿದೆ. ನಂತರ ಕರ್ನಾಟಕವು (12 ಪ್ರತಿಶತ) ಮತ್ತು ದೆಹಲಿ (ಶೇ. 8.6). ಗುಜರಾತ್ (ಶೇ. 7.1), ತಮಿಳುನಾಡು (ಶೇ. 6.7), ತೆಲಂಗಾಣ (ಶೇ. 6.5), ಉತ್ತರ ಪ್ರದೇಶ (ಶೇ. 5.9), ಹರ್ಯಾಣ (ಶೇ. 4.5), ಪಶ್ಚಿಮ ಬಂಗಾಳ (3.14), ಕೇರಳ (ಶೇ.3.05 ) ರಾಜ್ಯಗಳು ಅಗ್ರ 10 ಸ್ಥಾನ ಪಡೆದುಕೊಂಡಿವೆ.

ಭಾರತದಿಂದ ಯುಕೆಗೆ ಹರಿದು ಬರುತ್ತಿರುವ ಒಟ್ಟು ಎಫ್‌ಡಿಐನಲ್ಲಿ ಶೇ. 78 ರಷ್ಟಿದೆ. ಭಾರತ ಮತ್ತು ಯುಕೆ ವೇಗವಾಗಿ ಬದಲಾಗುತ್ತಿರುವ ಜಾಗತಿಕ ಸಂಕೀರ್ಣತೆಗಳನ್ನು ವಿಕಸನಗೊಳಿಸುವುದನ್ನು ಮತ್ತು ಭಾರತ-ಯುಕೆ ಕಾರಿಡಾರ್ ಅನ್ನು ಮರುರೂಪಿಸುವುದಕ್ಕೆ ನಮ್ಮ ವ್ಯವಹಾರಗಳು ಸಹಕರಿಸುತ್ತವೆ. ಸುರಕ್ಷಿತ ಮತ್ತು ಸುಸ್ಥಿರ ಹೂಡಿಕೆಯಾಗಿದೆ ಎಂದು ನಾನು ನಂಬುತ್ತೇನೆ ಎಂದು ಲಂಡನ್‌ನಲ್ಲಿ ವರದಿಯನ್ನು ಬಿಡುಗಡೆ ಮಾಡಿದ ಯುಕೆ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net