ಮಹಾರಾಷ್ಟ್ರ ಆಯ್ತು ಈಗ ತಮಿಳುನಾಡಿನಲ್ಲೂ ಕಿರಿಕ್: ಕಿಡಿಗೇಡಿಗಳಿಂದ ಕರ್ನಾಟಕದ ವಾಹನದ ಮೇಲೆ ಕಲ್ಲು ತೂರಾಟ

Tamil Kannadiga
Published on

ಚಿಕ್ಕಬಳ್ಳಾಪುರ: ಮಹಾರಾಷ್ಟ್ರದ ಬಳಿಕ ಇದೀಗ ತಮಿಳುನಾಡಿನಲ್ಲೂ ಕನ್ನಡಿಗರ ಮೇಲೆ ಕಿರಿಕ್​ ಶುರುವಾಗಿದೆ. ಕಿಡಿಗೇಡಿಗಳ ಗುಂಪೊಂದು ಕರ್ನಾಟಕದ ಟೆಂಪೋ ಟ್ರಾವೆಲ್ಲರ್​ ಮೇಲೆ ಕಲ್ಲು ತೂರಿರುವುದಾಗಿ ವರದಿಯಾಗಿದೆ.

ಅಯ್ಯಪ್ಪ ಸ್ವಾಮಿ ಮಾಲಾಧಾರಿ ಭಕ್ತರಿದ್ದ ವಾಹನದ ಮೇಲೆ ಕಲ್ಲು ತೂರಾಟ ನಡೆದಿದೆ. ತಮಿಳುನಾಡಿನ ಮಧುರೈನಲ್ಲಿ ಈ ಘಟನೆ ನಡೆದಿದೆ. ಅಯ್ಯಪ್ಪಸ್ಚಾಮಿ ದರ್ಶನ ಮುಗಿಸಿ ಮದುರೈ ದೇವಾಲಯಕ್ಕೆ ಕನ್ನಡಿಗರು ಆಗಮಿಸಿದ್ದರು. ಟಿಟಿ ವಾಹನದ ಮೇಲೆ ಕನ್ನಡ ಧ್ವಜ ಕಟ್ಟಿದ್ದಕ್ಕೆ ಕಿರಿಕ್ ಮಾಡಿರುವ ಕಿಡಿಗೇಡಿಗಳು, ವಾಹನದ ಮೇಲೆ ಕಲ್ಲು ತೂರಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಶಬರಿಮಲೆ‌ ಪ್ರವಾಸಕ್ಕೆ ತೆರಳಿ ಭಕ್ತರು ವಾಪಾಸ್ಸಾಗುತ್ತಿದ್ದರು. ಕನ್ನಡ ಧ್ವಜ ಕಟ್ಟಿದ್ದಕ್ಕೆ ಉದ್ದೇಶಪೂರ್ವಕವಾಗಿ ಕಲ್ಲು ತೂರಾಟ ನಡೆಸಿದ್ದು, ರಕ್ಷಣೆ ಕೊಡುವಂತೆ ಕನ್ನಡಿಗರು ಮನವಿ ಮಾಡಿದ್ದಾರೆ.

ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಹಾರಾಷ್ಟ್ರದಲ್ಲಿ ಕೆಲ ಪುಂಡರು ಕರ್ನಾಟಕದ ವಾಹನಗಳಿಗೆ ಕಲ್ಲು ತೂರುವುದು ಮತ್ತು ಮಸಿ ಬಳಿಯುವಂತೆ ದುಷ್ಕೃತ್ಯಕ್ಕೆ ಇಳಿದಿದ್ದಾರೆ. ಇದರ ಬೆನ್ನಲ್ಲೇ ತಮಿಳುನಾಡಿನಲ್ಲೂ ಈ ರೀತಿಯ ಘಟನೆ ನಡೆದಿರುವುದು ಆಘಾತಕಾರಿಯಾಗಿದೆ. (ದಿಗ್ವಿಜಯ ನ್ಯೂಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net