

ಮುಂಬೈ: ಪೋಷಕರು ದುಬಾರಿ ಬೆಲೆಯ ಐಫೋನ್ ಅನ್ನು ಕೊಡಿಸಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮನನೊಂದು ಯವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈ ನಡೆದಿದೆ.
ಮೃತರನ್ನು ಕಾಮೋಥೆ ಪ್ರದೇಶದ ನಿವಾಸಿ ಸಂಜಯ್ ವರ್ಮಾ (18) ಎಂದು ಗುರುತಿಸಲಾಗಿದೆ. ಜುಲೈ 8 (ಸೋಮವಾರ) ರಾತ್ರಿ 11.30 ರ ಸುಮಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯುವಕನು ತಂದೆ ಬಳಿ 1.5 ಲಕ್ಷ ರೂಪಾಯಿ ಬೆಲೆಯ ಐಫೋನ್ ಕೊಡಿಸಬೇಕೆಂದು ಹಟ ಹಿಡಿದಿದ್ದನು. ಆದರೆ ಪೋಷಕರು ಮೊಬೈಲ್ ಕೊಡಿಸಲು ನಿರಾಕರಿಸಿದ್ದರು. ನಂತರ ತಂದೆ, ಮಗನಿಗೆ ವಿವೋ ಫೋನ್ನನ್ನು ತಂದು ಕೊಟ್ಟಿದ್ದಾನೆ. ಇದರಿಂದ ಸಂಜಯ್ ಖಿನ್ನತೆಗೆ ಒಳಗಾಗಿದ್ದನು. ಇದೇ ಕಾರಣಕ್ಕೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.