ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ಪ್ರತಿ ಟನ್ ಕಬ್ಬಿಗೆ 3163 ರೂ. ನಿಗದಿ

Deficit rainfall leads to declining sugarcane acreage
Published on

ಮಹಾಲಿಂಗಪುರ: ಸಮೀಪದ ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ 2020-21ರ ಕಬ್ಬು ನುರಿಸುವ ಹಂಗಾಮಿಗೆ ಸರ್ಕಾರದಿಂದ ನಿಗದಿಪಡಿಸಿದ ನ್ಯಾಯ ಮತ್ತು ಲಾಭದಾಯಕ (ಎ್ಆರ್‌ಪಿ) ಬೆಲೆ ಪ್ರತಿ ಟನ್‌ಗೆ ( ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚ ಸೇರಿ) 3163 ರೂ. ಇರುತ್ತದೆ. ಕಾರಣ ಕಬ್ಬು ಕಟಾವು ಮತ್ತು ಸಾಗಣೆೆ ವೆಚ್ಚ ಹೊರತುಪಡಿಸಿ ಪ್ರಸಕ್ತ ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ 2500 ರೂ. ಬೆಲೆ ಘೋಷಿಸಲು ಹರ್ಷವೆನಿಸುತ್ತದೆ. ಆದ್ದರಿಂದ ಗೋದಾವರಿ ಸಕ್ಕರೆ ಕಾರ್ಖಾನೆಗೆ ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ಕಬ್ಬನ್ನು ಪೂರೈಸಿ ಸಹಕರಿಸಬೇಕೆಂದು ಕಬ್ಬು ಬೆಳೆಗಾರರಲ್ಲಿ ಗೋದವರಿ ಬಯೋರಿಫೈನರಿಜನ್ ಕಾರ್ಯನಿವಾಹಕ ನಿರ್ದೇಶಕ ಬಿ.ಆರ್. ಬಕ್ಷಿ ಪ್ರಕಟಣೆಯಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net