Madhya Pradesh: ಪ್ರಿಯಕರನನ್ನು ಮರಕ್ಕೆ ಕಟ್ಟಿಹಾಕಿ, ವಿವಾಹಿತೆಗೆ..? ವೀಡಿಯೋ ವೈರಲ್​

Child Rape (1)
Published on

ಭೋಪಾಲ್​: ವಿವಾಹಿತೆ ಜೊತೆ ಪರಾರಿಯಾಗಿದ್ದ ವ್ಯಕ್ತಿ ಮತ್ತು ಅಪ್ರಾಪ್ತ ವಯಸ್ಕ ಸೇರಿದಂತೆ ಆತನ ಇಬ್ಬರು ಸಂಬಂಧಿಕರನ್ನು ಗ್ರಾಮಸ್ಥರು ಮರಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ಮಧ್ಯಪ್ರದೇಶ(Madhya Pradesh)ದ ಧಾರ್ ಜಿಲ್ಲೆಯ ಅರ್ಜುನ್ ಕಾಲೋನಿಯಲ್ಲಿ ನಡೆದಿದೆ. ಇದರ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ.

ವೈರಲ್​ ವಿಡಿಯೋದಲ್ಲಿ ಇರುವಂತೆ, ಮರಕ್ಕೆ ಕಟ್ಟಿಹಾಕಿದ ಮಹಿಳೆಯನ್ನು ಮತ್ತೊಬ್ಬ ಮಹಿಳೆ ಬೆತ್ತದಿಂದ ಹೊಡೆಯುತ್ತಿದ್ದಾಳೆ. ಅದೇ ರೀತಿ ಇನ್ನೊಬ್ಬ ವ್ಯಕ್ತಿ ಮರಕ್ಕೆ ಕಟ್ಟಿಹಾಕಿರುವ ಪುರುಷನನ್ನು ಥಳಿಸುತ್ತಿದ್ದಾನೆ. ಅಷ್ಟೇ ಅಲ್ಲ, ಇತರ ಗ್ರಾಮಸ್ಥರೂ ಆ ಮಹಿಳೆ ಮತ್ತು ವ್ಯಕ್ತಿಯನ್ನು ಕೋಲುಗಳಿಂದ ಹೊಡೆಯುವುದನ್ನು ಕಾಣಬಹುದು.

ಇನ್ನು ಈ ಘಟನೆ ನಡೆದಾಗ ಹಲವು ಮಹಿಳೆಯರು, ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ಜನರು ಅಲ್ಲಿ ನೆರೆದಿದ್ದಾರೆ. ಹಲವರು ತಮ್ಮ ಸೆಲ್ ಫೋನ್‌ಗಳಲ್ಲಿ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ. ಆದರೆ ಅವರ ರಕ್ಷಣೆಗೆ ಯಾರೂ ಬಂದಿಲ್ಲ ಎಂಬುದನ್ನು ಕಾಣಬಹುದು.

ಗ್ರಾಮದಿಂದ ನಾಪತ್ತೆಯಾಗಿದ್ದ ಮಹಿಳೆ ಪರಾರಿಯಾಗಲು ಸಹಾಯ ಮಾಡಿದ್ದಕ್ಕಾಗಿ ಹಲವರ ಮೇಲೆ ಜನರಿಗೆ ಅನುಮಾನವಿತ್ತು, ಈ ಕಾರಣದಿಂದಾಗಿ ಘಟನೆ ಸಂಭವಿಸಿದೆ. ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net